Home Karavali Karnataka ಜ್ಞಾನ ಗಂಗಾ ಕಾಲೇಜಿನಲ್ಲಿ 2025-26 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮ…!!

ಜ್ಞಾನ ಗಂಗಾ ಕಾಲೇಜಿನಲ್ಲಿ 2025-26 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮ…!!

ಮೂಡುಬೆಳ್ಳೆ : ಜ್ಞಾನ ಗಂಗಾ ಕಾಲೇಜು ನೆಲ್ಲಿಕಟ್ಟೆ ಮೂಡುಬೆಳ್ಳೆ ಇಲ್ಲಿ
2025-26 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗಿಡಕ್ಕೆ ನೀರು ಎರೆಯುವುದರ ಮೂಲಕ ಹಸಿರೇ ಉಸಿರು ಎಂಬ ದ್ಯೇಯವಾಕ್ಯದಂತೆ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರು ಹಾಗೂ ಲಯನ್ಸ್ ಕ್ಲಬ್ ಉಡುಪಿ ಇದರ ಅಧ್ಯಕ್ಷರು ಆಗಿರುವ ಶ್ರೀಯುತ ದಿನೇಶ್ ಕಿಣಿ ಇವರು ನೆರವೇರಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಇವರು ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ ಹಾಗೂ ಮುಂದಿನ ಜೀವನದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ
ಶ್ರೀಯುತ ಎಂ ಗೋಪಿಕೃಷ್ಣರಾವ್ ವಕೀಲರು ಹಾಗೂ ಸ್ಥಾಪಕ ಅಧ್ಯಕ್ಷರು ಜ್ಞಾನಗಂಗ ಪದವಿ ಪೂರ್ವ ಕಾಲೇಜು ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯೊಂದಿಗೆ ರಾಷ್ಟ್ರ ಹಾಗೂ ಸಮಾಜ ನಿರ್ಮಾಣದ ಕಾರ್ಯದಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀಯುತ ಪ್ರಭಾಕರ್ ಕೆ ಎಸ್ , ಕಾರ್ಯದರ್ಶಿ, ಜನರಲ್ ಇನ್ಸೂರೆನ್ಸ್ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ ಉಡುಪಿ ಇವರು , ರಾಷ್ಟ್ರೀಯ ಸೇವಾ ಯೋಜನೆ ಮಾನಸಿಕಸ್ಥೈರ್ಯ , ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಜ್ಞಾನಗಂಗಾ ಕಾಲೇಜಿನ ಪ್ರಾಂಶುಪಾಲೆ, ಡಾ. ಲೀನಾ ಎಸ್ ನಾಯಕ್ ಮಾತನಾಡುತ್ತ, ವಿದ್ಯಾಥಿಗಳಿಗೆ
ನಾಯಕತ್ವ ಗುಣ, ಸಮಯ ಪಾಲನೆ, ಸಭಾ ಕಂಪನ ಹೋಗಲಾಡಿಸುವಿಕೆ, ಸಹಬಾಳ್ವೆ, ಶಿಸ್ತುನ್ನು ರಾಷ್ಟ್ರೀಯ ಸೇವಾ ಯೋಜನೆ ಕಲಿಸಿಕೊಡುತ್ತದೆ ಎಂದು ಹೇಳಿದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಯಾದ ಭಾಸ್ಕರ್ ಆಚಾರ್ಯ ಇವರು ಪ್ರಸ್ತಾವನ ನುಡಿಯನ್ನು ನುಡಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ
ಸಹ ಯೋಜನಾಧಿಕಾರಿಯಾದ ಶ್ರೀಮತಿ ದಿವ್ಯ ಇವರು ಪ್ರಮಾಣವಚನ ವಾಚಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ನಾಯಕಿಯಾದ ಅಧಿತಿ ಭಟ್ ಸರ್ವರಿಗೂ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ನಾಯಕನಾದ ಪ್ರಣವ್ ಶೆಟ್ಟಿ ಧನ್ಯವಾದ ಸಲ್ಲಿಸಿದರು. ವಾಣಿಜ್ಯ
ವಿಭಾಗದ ವಿದ್ಯಾರ್ಥಿನಿಯಾದ ಕುಮಾರಿ ಜಾಸ್ಮಿನ್ ಕಾರ್ಯಕ್ರಮ ನಿರೂಪಿಸಿದರು.