Home Crime ಹೆಬ್ರಿ : ವ್ಯಕ್ತಿಯೋರ್ವ ಮರದ‌ ಕೊಂಬೆಗೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆ…!!

ಹೆಬ್ರಿ : ವ್ಯಕ್ತಿಯೋರ್ವ ಮರದ‌ ಕೊಂಬೆಗೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆ…!!

ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ‌‌ ಸಮೀಪ ವ್ಯಕ್ತಿಯೋರ್ವ ಕುಡಿತದ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮರದ ಕೊಂಬೆಗೆ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡ ನಡೆದಿದೆ.

ಮೃತಪಟ್ಟವರು ನಾಗೇಶ್ ಎಂದು ತಿಳಿದು ಬಂದಿದೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರ ಅನುಷಾ ಪ್ರಾಯ: 29 ವರ್ಷ ತಂದೆ: ಶಿವಪೂರ ಗ್ರಾಮ ಇವರ ಅಣ್ಣ ನಾಗೇಶ್‌ (32) ರವರು ರಕ್ತದೊತ್ತಡ ಕಾಯಿಲೆ ಇದ್ದು, ಹಾಗೂ ವಿಪರೀತ ಮದ್ಯಪಾನ ಮಾಡುವ ಚಟ ಹೋಂದಿದ್ದು ಅವರು ತಮಗೆ ಇರುವ ಕಾಯಿಲೆ ಹಾಗೂ ಕುಡಿತದ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ಮನನೊಂದು ದಿನಾಂಕ 12/09/2025 ರಂದು ಮದ್ಯಾಹ್ನ ಸಮಯ 12-30 ಗಂಟೆಯಿಂದ ಈ ದಿನ ದಿನಾಂಕ 13/09/2025 ರಂದು ಬೆಳಗ್ಗೆ 07-30 ಗಂಟೆಯ ಮಧ್ಯಾವಧಿಯಲ್ಲಿ ಹೆಬ್ರಿ ತಾಲೂಕು ಶಿವಪುರ ಗ್ರಾಮದ ದೊರಿಯಾಲ್‌ ಎಂಬಲ್ಲಿರುವ ಮೃತರ ಮನೆ ಹತ್ತಿರದ ಸರಕಾರಿ ಹಾಡಿಯಲ್ಲಿರುವ ದೊಡ್ಡ ಕಡ್ಮರೆ (ಕಾಟು) ಮರ ಹತ್ತಿ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ:18/2025 ಕಲಂ: 194 BNSS ರಂತೆ ಪ್ರಕರಣ ದಾಖಲಿಸಲಾಗಿದೆ.