ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ವ್ಯಕ್ತಿಯೊಬ್ಬರು ತೊಟದಲ್ಲಿ ತೆಂಗಿನಕಾಯಿ ಹೆಕ್ಕಲು ಹೋದಾಗ ಕಾಲು ಜಾರಿಯೋ ಅಥವಾ ಪಿಡ್ಸ್ ಬಂದು ಹೊಂದಡ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರು ಕಟಪಾಡಿ ನಿವಾಸಿ ಶೈಲೇಶ್ ಅಲ್ವಿನ್ ಡಿಸೋಜ(44) ಎಂದು ತಿಳಿಯಲಾಗಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ರಾಜೇಶ್ ಮೆಲ್ವಿನ್ ಡಿಸೋಜ (46) ಕಟಪಾಡಿ ಕಾಪು ಇವರ ತಮ್ಮ ಶೈಲೇಶ್ ಅಲ್ವಿನ್ ಡಿಸೋಜ(44)ರವರು ಅವಿವಾಹಿತರಾಗಿದ್ದು, ಆರು ತಿಂಗಳ ಹಿಂದೆ ಪಿಡ್ಸ್ ಖಾಯಿಲೆ ಬಂದು ಅವರು ಈ ಬಗ್ಗೆ ಉಡುಪಿಯ ನ್ಯೂ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ವೈದ್ಯರು ನೀಡಿದ ಮಾತ್ರೆಗಳನ್ನು ಸೇವಿಸುತ್ತಿದ್ದರು. ಶೈಲೇಶ್ ಅಲ್ವಿನ್ ಡಿಸೋಜ ದಿನಾಂಕ 04/08/2025ರಂದು ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದು ಬಳಿಕ ರಾತ್ರಿ ವಾಪಸ್ಸು ಮನೆಗೆ ಬಂದಿರುವುದಿಲ್ಲ. ನಂತರ ಪಿರ್ಯಾದಿದಾರರು ಹಾಗೂ ಅವರ ಸಂಬಂಧಿಕರು ಸೇರಿ ಶೈಲೇಶ್ ಅಲ್ವಿನ್ ಡಿಸೋಜ ರವರನ್ನು ಹುಡುಕಾಡುವಾಗ ದಿನಾಂಕ 05/08/2025ರಂದು ಸಂಜೆ 4:30 ಗಂಟೆಗೆ ಕಾಪು ತಾಲೂಕು ಮೂಡಬೆಟ್ಟು ಗ್ರಾಮದ ಕುಕ್ಕರಬೆಟ್ಟುವಿನ ಅನಿಲ್ ರವರ ಮಾತೃಛಾಯಾ ಮನೆಯ ಹಿಂಬದಿಯಲ್ಲಿನ ಸಣ್ಣ ನೀರಿನ ಹೊಂಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ತೇಲುತ್ತಿರುವುದನ್ನು ನೋಡಿರುತ್ತಾರೆ. ಶೈಲೇಶ್ ಅಲ್ವಿನ್ ಡಿಸೋಜ ರವರು ಅನಿಲ್ ರವರ ತೊಟದಲ್ಲಿ ತೆಂಗಿನಕಾಯಿ ಹೆಕ್ಕಲು ಹೋದಾಗ ಕಾಲು ಜಾರಿಯೋ ಅಥವಾ ಪಿಡ್ಸ್ ಬಂದು ಹೊಂದಡ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 28/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.