Home Karavali Karnataka ವಳಕಾಡು ಸರಕಾರಿ ಪ್ರೌಢಶಾಲೆ : ಕನ್ನಡ ರಾಜ್ಯೋತ್ಸವ ಸಂಭ್ರಮ…!!

ವಳಕಾಡು ಸರಕಾರಿ ಪ್ರೌಢಶಾಲೆ : ಕನ್ನಡ ರಾಜ್ಯೋತ್ಸವ ಸಂಭ್ರಮ…!!

ಉಡುಪಿ : ವಳಕಾಡು ಸರಕಾರಿ ಪ್ರೌಢಶಾಲೆಯ ನಲಂದಾ ಸಭಾಭವನದಲ್ಲಿ ಕನ್ನಡ ಸಂಘ, ಇಂಟರಾಕ್ಟ್ ಸಂಘ, ರೋಟರಿ ಕ್ಲಬ್ ಉಡುಪಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪ್ರಾದೇಶಿಕ ಕಛೇರಿ, ಬನ್ನಂಜೆ, ಉಡುಪಿ ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್ ಪಿ , ಗೌರವ ಕಾರ್ಯದರ್ಶಿ ಜನಾರ್ಧನ ಕೊಡವೂರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಲ್ಲಿನ ಮುಖ್ಯ ವ್ಯವಸ್ಥಾಪಕರಾದ ಕೃಷ್ಣರಾಜ ಭಟ್, ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗಡೆ, ಮುಖ್ಯ ಶಿಕ್ಷಕಿ ಪೂರ್ಣಿಮಾ ಉಪಸ್ಥಿತರಿದ್ದರು. ಕನ್ನಡ ಭಾಷಾ ಶಿಕ್ಷಕರಾದ ಲಲಿತಾ ಮತ್ತು ಗಣಪತಿ ಭಟ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ವಿದ್ಯಾರ್ಥಿಗಳಿಗೆ ಕನ್ನಡ ನಾಡು ನುಡಿ ಸಂಸ್ಕೃತಿಯ ಕುರಿತು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕನ್ನಡ ಗೀತ ಗಾಯನ, ಯಕ್ಷಗಾನ ನೃತ್ಯ ಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ನಾಡು ನುಡಿಯ ಕುರಿತು ಅಭಿಮಾನವನ್ನು ಮೂಡಿಸಲಾಯಿತು. ಕನ್ನಡ ಸಂಘದ ಸದಸ್ಯೆ ಮೇಘಾ ಕನ್ನಡ ನಾಡಿನ ಸಂಸ್ಕೃತಿಯ ಕುರಿತು ರಾಜ್ಯೋತ್ಸವ ಸಂದೇಶವನ್ನು ನೀಡಿದರು. ನಿಸರ್ಗ, ಹರ್ಷಿತ, ಜ್ಯೋತಿ, ಮಾನ್ಯತಾ, ಅಶ್ವಿನ್ ಪ್ರಭು ವಿಜೇತರ ಪಟ್ಟಿಯನ್ನು ವಾಚಿಸಿದರು. ವಿಶ್ವ ಫಕೀರಪ್ಪ ಕಳ್ಳನ್ನವರ್ ಮತ್ತು ಮೇಧಾ ಕಾರ್ಯಕ್ರಮವನ್ನು ನಿರ್ವಹಿಸಿದರು.