ಮಂಗಳೂರು : ಬೋಳಿಯಾರು ಗ್ರಾಮದ ಜಲಕದ ಕಟ್ಟೆ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಅಡ್ಡೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನ ಪ್ರದೀಪ್, ಪ್ರಿನ್ಸಲ್, ವಿರೇಂದ್ರ ಮತ್ತು ರೋಹಿತ್ ಎಂದು ಗುರುತಿಸಲಾಗಿದೆ.
ಅವರಿಂದ 1,200 ರೂ. 5 ಹುಂಜ, ಕೊಳಿಯ ಕಾಲಿಗೆ ಕಟ್ಟಿದ್ದ ಎರಡು ಬಾಳು, ಮೂರು ದ್ವಿಚಕ್ರ ವಾಹನ ಹಾಗೂ ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.




