ಕಾಸರಗೋಡು: ವೆಳ್ಳರಿಕುಂಡು ಪೊಲೀಸ್ ಠಾಣಾ ವ್ಯಾಪ್ತಿಯ ಪಡನ್ನ ಕನಕಪ್ಪಳ್ಳಿ ನಿವಾಸಿ ಸಂತೋಷ್ ಶ್ರೀಜಾ ದಂಪತಿ ಪುತ್ರ ಅಭಿಮನ್ಯು (25) ಎಂಬುವರ ಮೃತದೇಹ ಕೊಯಂಬತ್ತೂರಿನ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ಎರಡು ದಿನದ ಹಿಂದೆ ಅಭಿಮನ್ಯು ನಾಪತ್ತೆಯಾಗಿದ್ದು, ಈ ಬಗ್ಗೆ ಮನೆಯವರು ವೆಳ್ಳರಿಕುಂಡು ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಕೊಯಂಬತ್ತೂರಿನಲ್ಲಿ ಮೃತದೇಹ ಪತ್ತೆಯಾಗಿರುವ ಬಗ್ಗೆ ಪೊಲೀಸರು ಅಭಿಮನ್ಯು ಮನೆಯವರಿಗೆ ಮಾಹಿತಿ ನೀಡಿದ್ದರು. ಮನೆಯವರು ಮೃತದೇಹದ ಗುರುತು ಪತ್ತೆಹಚ್ಚಿದ್ದಾರೆ.



