Home Latest ಉಡುಪಿ ತಾಲೂಕು 16 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಬಿತ್ತಿಚಿತ್ರ ಅನಾವರಣ..!! 

ಉಡುಪಿ ತಾಲೂಕು 16 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಬಿತ್ತಿಚಿತ್ರ ಅನಾವರಣ..!! 

ಉಡುಪಿ : ಉಡುಪಿ ತಾಲೂಕು 16 ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಮೇ 3ರಂದು ಡಾ. ಭಾಸ್ಕರಾನಂದ ಕುಮಾರ್ ಸರ್ವಾಧ್ಯಕ್ಸತೆಯಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಐ ವೈ ಸಿ ಸಭಾಂಗಣದಲ್ಲಿ ನಡೆಯಲಿದ್ದು, ಇದರ ಪ್ರಚಾರಾದ *ಬಿತ್ತಿ ಚಿತ್ರ* ವನ್ನು ಮಾನ್ಯ ಉಡುಪಿ ಶಾಸಕ ಯಶ್ ಪಾಲ ಸುವರ್ಣರವರು ಲೋಕಾರ್ಪಣೆಗೊಳಿಸಿ ಕಸಾಪ ಉಡುಪಿ ತಾಲೂಕು ಘಟಕವು ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸುತ್ತಾ ಕನ್ನಡಿಗರ ಮನೆ ಮಾತಾಗಿದೆ ಎಂದರು. ಸಮ್ಮೇಳನಕ್ಕೆ ನಾನು ಬರುವೆ, ನೀವೆಲ್ಲರೂ ಬನ್ನಿ ಎಂದು ಸಾರ್ವಜನಿಕರಿಗೆ ಕರೆ ಇತ್ತರು.

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್ ಪಿ , ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಸಮ್ಮೇಳನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕೊಡವೂರು, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು , ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ್ ಮಹಿಳಾ ಪ್ರತಿನಿಧಿ ಅನಿತಾ ಸಿಕ್ವೇರಾ, ಸದಸ್ಯರಾದ ದೀಪ ಕರ್ಕಿ, ಪ್ರಸನ್ನ ಕುಮಾರ್ ಹಿರೇಮಠ ಉಪಸ್ಥಿತರಿದ್ದರು.