Home Latest ದೇಶದ ಜನರಿಗೆ ಮತ್ತೊಂದು ಶಾಕ್ : ಪೆಟ್ರೋಲ್, ಡೀಸೆಲ್ ದರ 90 ಪೈಸೆ ಏರಿಕೆ: ಪರಿಷ್ಕೃತ...

ದೇಶದ ಜನರಿಗೆ ಮತ್ತೊಂದು ಶಾಕ್ : ಪೆಟ್ರೋಲ್, ಡೀಸೆಲ್ ದರ 90 ಪೈಸೆ ಏರಿಕೆ: ಪರಿಷ್ಕೃತ ದರ ಇಂದಿನಿಂದಲೇ ಜಾರಿ*

ದೇಶದ ಜನರಿಗೆ ಮತ್ತೊಂದು ಶಾಕ್ : ಪೆಟ್ರೋಲ್, ಡೀಸೆಲ್ ದರ 90 ಪೈಸೆ ಏರಿಕೆ: ಪರಿಷ್ಕೃತ ದರ ಇಂದಿನಿಂದಲೇ ಜಾರಿ*

 

 

ನವದೆಹಲಿ: ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್ ದರ 90 ಪೈಸೆ ಏರಿಕೆಯಾಗಿದೆ.

 

ಮೇ 15ರಂದು ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ತಲಾ ₹3ರಷ್ಟು ಹೆಚ್ಚಿಸಿತ್ತು. ಇದೀಗ ಇಂಧನ ದರ ಮತ್ತೆ ಏರಿಕೆಯಾಗಿದೆ.

 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹97.77ರಿಂದ ₹98.64ಕ್ಕೆ ಹೆಚ್ಚಿಸಲಾಗಿದೆ. ಡೀಸೆಲ್ ದರ ₹90.67ರಿಂದ ₹91.58ಕ್ಕೆ ಏರಿಕೆಯಾಗಿದೆ.

 

ಬೆಂಗಳೂರಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹106.17ರಿಂದ ₹107.12ಕ್ಕೆ ಏರಿಕೆಯಾಗಿದ್ದರೆ, ಡೀಸೆಲ್ ದರ ₹94.10ರಿಂದ ₹95.04ಕ್ಕೆ ಏರಿಕೆಯಾಗಿದೆ.

 

ಮುಂಬೈನಲ್ಲಿ ಪೆಟ್ರೋಲ್ ಬೆಲೆ 91 ಪೈಸೆ ಏರಿಕೆಯಾಗಿ ಪ್ರತಿ ಲೀಟರ್‌ಗೆ ₹107.59ಕ್ಕೆ ಮತ್ತು ಡೀಸೆಲ್ ಬೆಲೆ 94 ಪೈಸೆ ಏರಿಕೆಯಾಗಿ ಪ್ರತಿ ಲೀಟರ್‌ಗೆ ₹94.08ಕ್ಕೆ ತಲುಪಿದೆ.

 

ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆಯಲ್ಲಿ 96 ಪೈಸೆ ಏರಿಕೆಯಾಗಿ ಪ್ರತಿ ಲೀಟರ್‌ಗೆ ₹109.70 ತಲುಪಿದ್ದರೆ, ಡೀಸೆಲ್ ಬೆಲೆ 94 ಪೈಸೆ ಏರಿಕೆಯಾಗಿ ಪ್ರತಿ ಲೀಟರ್‌ಗೆ ₹96.07 ಆಗಿದೆ.

 

ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 82 ಪೈಸೆ ಏರಿಕೆಯಾಗಿ ಪ್ರತಿ ಲೀಟರ್‌ಗೆ ₹104.49ಕ್ಕೆ ಮತ್ತು ಡೀಸೆಲ್ ಬೆಲೆ 86 ಪೈಸೆ ಏರಿಕೆಯಾಗಿ ಪ್ರತಿ ಲೀಟರ್‌ಗೆ ₹96.11 ಕ್ಕೆ ತಲುಪಿದೆ.