Home Latest ಮತ್ಸ್ಯಗಂಧ ರೈಲಿನಲ್ಲಿ ಐವರು ಅಪ್ರಾಪ್ತ ಬಾಲಕರು ಪತ್ತೆ…!!

ಮತ್ಸ್ಯಗಂಧ ರೈಲಿನಲ್ಲಿ ಐವರು ಅಪ್ರಾಪ್ತ ಬಾಲಕರು ಪತ್ತೆ…!!

ಉಡುಪಿ: ಮತ್ತ್ವಗಂಧ ಎಕ್ಸ್‌ಪ್ರೆಸ್ (12619) ರೈಲು ಬಾರಕೂರು ಉಡುಪಿ ನಡುವೆ ಸಂಚರಿಸುತ್ತಿದ್ದ ವೇಳೆ ಟಿಟಿಇ ಸಬಿತಾ ಶೆಟ್ಟಿ ಟಿಕೆಟ್ ಪರಿಶೀಲಿಸುತ್ತಿದ್ದ ವೇಳೆ ಐವರು ಅಪ್ರಾಪ್ತ ಬಾಲಕರು ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿದ್ದು, ಯಾವುದೇ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದರು.

ರೈಲ್ವೆ ಪೊಲೀಸ್ ರಕ್ಷಣಾ ಪಡೆಗೆ (ಆರ್‌ಪಿಎಫ್) ಮಾಹಿತಿ ನೀಡಿದ್ದು, ಉಡುಪಿ ರೈಲ್ವೆ ನಿಲ್ದಾಣದಲ್ಲಿ ಮುರಳೀಧರನ್ ಐವರು ಅಪ್ರಾಪ್ತ ಬಾಲಕರಿಗೆ ಆಪ್ತ ಸಮಾಲೋಚನೆ ನಡೆಸಿ, ಹೆಚ್ಚಿನ ಮಾಹಿತಿ ಪಡೆದರು.

ಮಕ್ಕಳು ಕೌಟುಂಬಿಕ ವಿಚಾರದಲ್ಲಿ ಮನೆಯಲ್ಲಿ ಹೇಳದೆ ರೈಲು ಹತ್ತಿದ್ದರು. ಮಕ್ಕಳಿಗೆ ಉಪಾಹಾರ ಒದಗಿಸಿ, ಉಡುಪಿ ಚೈಲ್ಡ್‌ ಹೆಲ್ತ್‌ ಡೆಸ್ಟ್‌ ವಶಕ್ಕೆ ಒಪ್ಪಿಸಲಾಗಿದೆ.