ಮಲ್ಪೆ: ಉಪ್ಪೂರು ಗ್ರಾಮ ಬ್ರಹ್ಮಾವರ ನಿವಾಸಿ ಜಯಂತಿ ಅಮೀನ್ ಅವರ ಗಂಡ ಪ್ರವೀಣ್ ಕುಮಾರ್ (76) ಅವರು ಮೇ 15, 2026 ರಂದು ಮಧ್ಯಾಹ್ನ 3:30 ಗಂಟೆ ಸುಮಾರಿಗೆ ಉಡುಪಿ ತಾಲೂಕು ತೆಂಕನಿಡಿಯೂರು ಗ್ರಾಮದ ತೊಟ್ಟಂನ ಸೂರಜ್ ಕುಮಾರ್ ಅವರ ಮನೆಯಿಂದ ತೆರಳಿದ್ದು, ಬಳಿಕ ಮನೆಗೆ ವಾಪಾಸಾಗಿಲ್ಲ ಎಂದು ತಿಳಿದುಬಂದಿದೆ.
ಸಂಬಂಧಿಕರ ಮನೆಗಳಲ್ಲಿಯೂ ಹುಡುಕಾಟ ನಡೆಸಿದರೂ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2026 ಕಲಂ ಮನುಷ್ಯ ಕಾಣೆ ಪ್ರಕರಣದಡಿ ತನಿಖೆ ಮುಂದುವರಿದಿದೆ.




