Home Crime ಜೈಲಿಗೆ ಹೋದ ನೋವಿನಲ್ಲಿ ಯುವಕ ಆತ್ಮಹತ್ಯೆ

ಜೈಲಿಗೆ ಹೋದ ನೋವಿನಲ್ಲಿ ಯುವಕ ಆತ್ಮಹತ್ಯೆ

A fabric low poly suicide rope with slipknot placed on the white concrete wall with white space on left. 3D illustration and rendered by program Blender.

 

ಉಡುಪಿ: ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ ಬೇಸರದಲ್ಲಿ ಯುವಕನೊಬ್ಬ ಮಣಿಪಾಲ ಕೆಎಂಸಿ ಕ್ಯಾಂಪಸ್ ಕಾರು ಪಾರ್ಕಿಂಗ್ ಶೆಡ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

ಸೊರಬ ನಿವಾಸಿ ಬಸವರಾಜ (25) ಮೃತರು. ಈತ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿ ಜೈಲಿಗೆ ಹೋಗಿ ಜಾಮೀನಿನಲ್ಲಿ ಬಿಡುಗಡೆಯಾದ ಬಳಿಕ ವಿಪರೀತ ಮದ್ಯಪಾನ ಮಾಡುತ್ತಿದ್ದು, ಜೈಲಿಗೆ ಹೋದ ಬಗ್ಗೆ ನೊಂದುಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.