Home Crime ಕಾರ್ಕಳದಲ್ಲಿ ಅಕಸ್ಮಿಕ ದುರ್ಘಟನೆ : ಬಾವಿಗೆ ಬಿದ್ದು ವ್ಯಕ್ತಿ ಸಾವು…!!

ಕಾರ್ಕಳದಲ್ಲಿ ಅಕಸ್ಮಿಕ ದುರ್ಘಟನೆ : ಬಾವಿಗೆ ಬಿದ್ದು ವ್ಯಕ್ತಿ ಸಾವು…!!

ಕಾರ್ಕಳ: ಬೋಳ ಗ್ರಾಮದ ಬಿಟ್ಟಿಂಗೇರಿ ನಿವಾಸಿ ಅಜಿತ್ ಪ್ರಸಾದ್ ಹೆಗ್ಡೆ (73) ಅವರು ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತರು ಕೃಷಿ ಕೆಲಸದೊಂದಿಗೆ ನಂದಳಿಕೆಯ ಶ್ರೀ ಲಕ್ಷ್ಮೀ ಜನಾರ್ಧನ ಶಾಲೆಯಲ್ಲಿ ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದರು. ದಿನಾಂಕ 17/05/2026 ರಂದು ಬೆಳಗ್ಗೆ ಸುಮಾರು 6:45 ಗಂಟೆಗೆ ತಮ್ಮ ಕೃಷಿ ತೋಟಕ್ಕೆ ನೀರು ಬಿಡಲು ಬಾವಿಯ ಹತ್ತಿರ ಹೋಗಿದ್ದ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಮೃತರ ಅಣ್ಣ ಭಕ್ತವತ್ಸಲ ಹೆಗ್ಡೆ ಅವರು ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ 20/2026 ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.