Home Crime ಉಡುಪಿ: ಅಂದರ್-ಬಾಹರ್ ಜುಗಾರಿ ಅಡ್ಡೆಗೆ ದಾಳಿ – ಐವರು ವಶಕ್ಕೆ…!!

ಉಡುಪಿ: ಅಂದರ್-ಬಾಹರ್ ಜುಗಾರಿ ಅಡ್ಡೆಗೆ ದಾಳಿ – ಐವರು ವಶಕ್ಕೆ…!!

ಉಡುಪಿ: ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಭರತೇಶ್ ಕಂಕಣವಾಡಿ ಅವರು ಮೇ 17, 2026ರಂದು ರೌಂಡ್ಸ್ ಕರ್ತವ್ಯದಲ್ಲಿರುವ ವೇಳೆ ಉಡುಪಿ ತಾಲೂಕು ಅಂಬಲಪಾಡಿ ಗ್ರಾಮದ ಅಂಬೇಡ್ಕರ್ ಭವನದ ಹಿಂದಿನ ಕುಂಜಿಗಡ್ಡೆ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಜುಗಾರಿ ಆಟವಾಡುತ್ತಿರುವ ಬಗ್ಗೆ ಮಾಹಿತಿ ಪಡೆದರು.

ತಕ್ಷಣ ದಾಳಿ ನಡೆಸಿದ ಪೊಲೀಸರು ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಟದಲ್ಲಿ ತೊಡಗಿದ್ದ ಸಿದ್ದಣ್ಣ ರೆಡ್ಡಿ (55), ಅಶೋಕ್ ದೊರೆ (38), ಪ್ರಭು (36), ಶೇಖಪ್ಪ (31) ಹಾಗೂ ಈರಣ್ಣ (24) ಎಂಬ ಐವರನ್ನು ವಶಕ್ಕೆ ಪಡೆದಿದ್ದಾರೆ.

ಅವರಿಂದ ಆಟಕ್ಕೆ ಬಳಸಲಾಗಿದ್ದ ₹710 ನಗದು, ಟವೆಲ್ ಹಾಗೂ ಇಸ್ಪೀಟು ಎಲೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2026 ಕಲಂ 87 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.