Home Karavali Karnataka ಬೈಂದೂರು : ನಾಯಿಗಳ ಉಚಿತ ಸಂತಾನಹರಣ ಚಿಕಿತ್ಸಾ ಶಿಬಿರ…!!

ಬೈಂದೂರು : ನಾಯಿಗಳ ಉಚಿತ ಸಂತಾನಹರಣ ಚಿಕಿತ್ಸಾ ಶಿಬಿರ…!!

ರೋಟರಿ ಭವನ ಬೈಂದೂರು ನಲ್ಲಿ ಸೆಪ್ಟೆಂಬರ್ 10ರಿಂದ 14ರವರೆಗೆ ಐದು ದಿನಗಳ ಕಾಲ ನಡೆಯುವ, ಮಧ್ವರಾಜ್ ಪ್ರಾಣಿ ಆರೈಕೆ ಟ್ರಸ್ಟ್ (ರಿ)ಮಲ್ಪೆ, ವರ್ಲ್ಡ್‌ವೈಡ್ ವೆಟರ್ನರಿ ಸರ್ವಿಸ್ ಇಂಡಿಯಾ, ಫ್ರೊಡೊ ಫೌಂಡೇಶನ್ , ರೋಟರಿ ಕ್ಲಬ್ ಬೈಂದೂರು, ಇನ್ನರ್ ವೀಲ್ ಕ್ಲಬ್ ಇವರುಗಳ ಸಂಯುಕ್ತ ಆಯೋಜನೆಯ ‘ದೇಶಿತಳಿಯ ಸಾಕು ನಾಯಿಗಳ ಉಚಿತ ಸಂತಾನ ಹರಣ ಚಿಕಿತ್ಸಾ ಶಿಬಿರಕ್ಕೆ’ ಚಾಲನೆ ನೀಡಲಾಯಿತು.

ಶಿಬಿರ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪಶು ವೈದ್ಯಾಧಿಕಾರಿಗಳಾದ ಡಾ. ಶಂಕರಶೆಟ್ಟಿ ಅವರು “ಬೀದಿ ನಾಯಿಗಳ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವ ಈ ಹಾಗೂ ನಾಯಿಗಳು ಆರೋಗ್ಯವನನ್ನು ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಶಿಬಿರವನ್ನು ಬೈಂದೂರಿನಲ್ಲಿ ಆಯೋಜಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ” ಎಂದರು

ರೋಟರಿ ಕ್ಲಬ್ ಬೈಂದೂರು ಇದರ ಅಧ್ಯಕ್ಷರಾದ ರೊ ಸುಬ್ರಹ್ಮಣ್ಯ ಜಿ ಉಪ್ಪುಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ರೋಟರಿ ಸಹಾಯಕ ಗವರ್ನರ್ ರೊ ಐ ನಾರಾಯಣ್, ಇನ್ನರ್ ವೀಲ್ ಅಧ್ಯಕ್ಷರಾದ ಶಾರದ ಕೆ, ಚೈತ್ರ ಯಡ್ತರೆ ,ಪಟ್ಟಣ ಪಂಚಾಯತ್ ಪರವಾಗಿ ಶ್ರೀ ಸಂತೋಷ್ ಮತ್ತು ರವಿರಾಜ್, ವರ್ಲ್ಡ್‌ವೈಡ್ ವೆಟರ್ನರಿ ಸರ್ವಿಸ್ ಇಂಡಿಯಾದ ಡಾ ಚೇತನ್, ಡಾ ಪ್ರದೀಪ್, ಪ್ರೋಡೋ ಫೌಂಡೇಶನ್ ನ , ಶ್ವೇತಾ RM , ತೇಜಸ್ವಿನಿ ಮುಂಜೂಷಾ, ಹಾಗೂ ಸ್ವಾನಪ್ರಿಯ ರಾದ ಶ್ರೀಮತಿ ನಿರ್ಮಲ ಇನ್ನಿತರರು ಉಪಸ್ಥಿತರಿದ್ದರು.

ಪ್ರೋಡೋ ಫೌಂಡೇಶನ್ ಮುಖ್ಯಸ್ಥರು ಕಾರ್ಯಕ್ರಮದ ನಿರ್ದೇಶಕರುಗಳಾದ ಗಳಾದ ಶ್ರೀ ತನ್ವೀರ್ ತಾಜ್ ಎಲ್ಲರನ್ನು ಸ್ವಾಗತಿಸಿದರು.ಶ್ರೀಮತಿ ಪ್ರಿಯಾಂಕ ಜೆನಾ ತಾಜ್ ಪ್ರಸ್ತಾವಿಕ ಮಾತನಾಡಿದರು.ಐದು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ 150 ನಾಯಿಗಳಿಗೆ ಉಚಿತ ಸಂತಾನ ಹರಣ ಚಿಕಿತ್ಸೆ ಹಾಗೂ ಲಸಿಕೆ ಸೌಲಭ್ಯ ಏರ್ಪಡಿಸಲಾಗಿದೆ..ಇನ್ನು ಕೂಡ ಕೆಲವು ನಾಯಿಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.