ಉಡುಪಿ : ಉಡುಪಿ ಜಿಲ್ಲೆಯ ಮಣಿಪಾಲ -ಪರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಪಾಯಕಾರಿಯಾದ ದೂಡ್ಡ ದೂಡ್ಡ ಗುಂಡಿಗಳಿಂದ ವಾಹನ ಸಂಚಾರಕ್ಕೆ ಕಷ್ಟಕರವಾಗಿದ್ದು. ಇದ್ದರಿಂದ ಹಲವಾರು ದಿನಗಳಿಂದ ರಸ್ತೆ ಅಪಘಾತಗಳು ನಡೆಯುತ್ತಿದ್ದು..ಈ ಮಾರ್ಗವಾಗಿ ದಿನನಿತ್ಯ ಸಂಚಾರಿಸುವ ಶಾಲಾ -ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತಿದೆ. ಈ ಅಪಾಯಕರಿ ಗುಂಡಿಗಳಿಂದ ಎಷ್ಚೂ ಜನರು ಅಮೂಲ್ಯ ಜೀವಗಳನ್ನು ಕಳೆದು ಕೊಂಡಿರುತ್ತಾರೆ..ಮೊನ್ನಷ್ಚೆ ದ.ಕ ಜಿಲ್ಲೆಯ ಕೊಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಗುಂಡಿಯಿಂದ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ತನ್ನ ಅಮೂಲ್ಯ ಜೀವ ಕಳೆದು ಕೊಂಡಿರುವುದರಿಂದ..ಈ ಗುಂಡಿಗಳಿಂದ ಇನ್ನಷ್ಟು ಜೀವಗಳು ಕಳೆದು ಕೊಳ್ಳದಂತೆ ಮುನ್ನೆಚರಿಕೆ ವಹಿಸಿ ಸಂಬಂಧ ಪಟ್ಟ ಇಲಾಖೆಯವರಿಂದ ತ್ವರಿತಗತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳನ್ನು ಮುಚ್ಚಿಸಿ ಮುಕ್ತ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಯವರಿಗೆ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ಕರ್ನಾಟಕ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ಮನವಿ ನೀಡಿದರು..
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಯವರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ತುರ್ತಾಗಿ ಮುಚ್ಚಿಸುವಂತೆ ಸಂಬಂಧ ಪಟ್ಟ ಅಧಿಕಾರಿಯವರಿಗೆ ಸೂಚಿಸಿದರು…