Home Crime ಹೋಂ ಸ್ಟೇ ಸ್ನಾನಗೃಹದಲ್ಲಿ ಯುವತಿ ಅನುಮಾನಾಸ್ಪದ ಸಾವು…!!

ಹೋಂ ಸ್ಟೇ ಸ್ನಾನಗೃಹದಲ್ಲಿ ಯುವತಿ ಅನುಮಾನಾಸ್ಪದ ಸಾವು…!!

ಚಿಕ್ಕಮಗಳೂರು: ಹೋಂ ಸ್ಟೇ ಸ್ನಾದ ಗೃಹದಲ್ಲಿ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳುರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿರುವ ಹಿಪ್ಲ ಹೋಮ್ ಸ್ಟೇಯಲ್ಲಿ ನಡೆದಿದೆ.

ದೇವಲಾಪುರ ಗ್ರಾಮದ ರಂಜಿತಾ (27) ಮೃತ ಯುವತಿ. ರಂಜಿತಾ ಹಾಗೂ ರೇಖಾ ಎಂಬ ಯುವತಿಯರು ಸ್ನೇಹಿತೆಯ ಎಂಗೇಜ್ ಮೆಂಟ್ ಗೆಂದು ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಬಂದಿದ್ದರು.

ಮೃತ ರಂಜಿತಾ ಚಿಕ್ಕಮಗಳೂರಿನ ದೇವಲಾಪುರ ಮೂಲದವರು. ರಂಜಿತಾ ಹಾಗೂ ರೇಖಾ ಬೆಂಗಳೂರುನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರು.

ಎರಡು ದಿನಗಳ ಹಿಂದೆ ಹಿಪ್ಲ ಹೋಂ ಸ್ಟೇನಲ್ಲಿ ರೂಮ್ ಪಡೆದು ವಾಸವಾಗಿದ್ದರು. ಸಂಜೆ ಫಾಸ್ಟ್ ಫುಡ್ ಅಂಗಡಿಯಲ್ಲಿ ಸಮಯಕಳೆದಿದ್ದರು. ಬಳಿಕ ಸ್ಕೂಟಿಯಲ್ಲಿ ಹೋಂ ಸ್ಟೇಗೆ ಹೋಗಿದ್ದಾರೆ. ಇಂದು ಬೆಳಗಾಗುವಷ್ಟರಲ್ಲಿ ಹೋಂ ಸ್ಟೇ ಸ್ನಾನದ ಗೃಹದಲ್ಲಿ ರಂಜಿತಾ ಶವವಾಗಿ ಪತ್ತೆಯಾಗಿದ್ದಾಳೆ. ಹೋಂ ಸ್ಟೇನಲ್ಲಿ ಯಾವುದೇ ಸಿಸಿಟಿವಿ ಕೂದ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೇ ಹಿಪ್ಲ ಹೋಂ ಸ್ಟೇ ಎರಡು ವರ್ಷಗಳಿಂದ ನಡೆಯುತ್ತಿದ್ದರೂ ಯಾವುದೇ ಲೈಸನ್ಸ್ ಕೂಡ ಇರಲಿಲ್ಲ. ಇದೀಗ ಹೋಂ ಸ್ಟೇನಲ್ಲಿ ವಾಸವಾಗಿದ್ದ ಯುವತಿ ಏಕಾಏಕಿ ಸಾವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.