ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ಎಲ್ಲೂರು ಗ್ರಾಮದ ನಿವಾಸಿಯೊಬ್ಬರು ತೋಡಿನ ಬಳಿ ತುಂಡಾಗಿ ಬಿದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಶಾಕ್ ಹೊಡೆದು ಮೃತಪಟ್ಟ ಘಟನೆ ನಡೆದಿದೆ.
ಸಾವನ್ನಪ್ಪಿದವರು ಸದಾಶಿವ ಎಂದು ತಿಳಿಯಲಾಗಿದೆ.
ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ಹರೀಶ್ (39), ಎಲ್ಲೂರು ಗ್ರಾಮ, ಕಾಪು ಇವರ ತಂದೆ ಸದಾಶಿವ(76) ರವರು ದಿನಾಂಕ 04/09/2025 ರಂದು 11:00 ಗಂಟೆಗೆ ಗದ್ದೆ ಕಡೆಗೆ ಹುಲ್ಲು ತರಲು ಹೋದವರು ವಾಪಾಸು ಬಾರದೇ, ಅವರನ್ನು ಸುತ್ತ ಮುತ್ತಾ ಹುಡುಕಾಡಿದರೂ ಪತ್ತೆಯಾಗದೇ ಇದ್ದ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿರುತ್ತದೆ.
ಪಿರ್ಯಾದಿದಾರರು ತಮ್ಮ ಮನೆಯ ಸುತ್ತ ಮುತ್ತ ವಿದ್ಯುತ್ ಸರಬರಾಜು ಇಲ್ಲದೇ ಇದ್ದು ತಮ್ಮ ಮನೆಯಿಂದ 500 ಮೀಟರ್ ದೂರ ಇರುವ ಮಳೆಗಾಲದ ನೀರು ಹರಿದು ಹೋಗುವ ತೋಡಿನ ಬಳಿ ವಿದ್ಯುತ್ ಕಂಬದಲ್ಲಿ ಇದ್ದ ವಯರ್ ಗಾಳಿ ಮಳೆಗೆ ತುಂಡಾಗಿ ಬಿದ್ದಿದ್ದು, ಸದಾಶಿವ ರವರ ಹುಡುಕಾಟದಲ್ಲಿರುವಾಗ ವಿದ್ಯುತ್ ವಯರ್ ತುಂಡಾದ ಸ್ಥಳದಿಂದ ಸುಮಾರು 10 ಮೀಟರ್ ದೂರದಲ್ಲಿ ತೋಡಿನ ಸುಮಾರು 2 ಅಡಿ ನೀರಿನಲ್ಲಿ ಪಿರ್ಯಾದಿದಾರರ ತಂದೆಯ ಮೃತದೇಹವಿದ್ದು ಮೃತರ ಎಡಕೈ ಅಂಗೈನಲ್ಲಿ ಸುಟ್ಟಂತೆ ಚರ್ಮ ಸುಲಿದ, ಎಡ ಕೆನ್ನೆ, ಬಾಯಿ ಭಾಗದಲ್ಲಿ, ಕೈ ಕಾಲುಗಳಲ್ಲಿ ಗಾಯವಾಗಿರುವುದು ಕಂಡು ಬಂದಿರುತ್ತದೆ. ಸದಾಶಿವ ರವರು ದಿನಾಂಕ 04/09/2025 ರಂದು ಬೆಳಿಗ್ಗೆ 11:00 ಗಂಟೆಗೆ ಗದ್ದೆ ಕಡೆಗೆ ಹೋದವರಿಗೆ 11:00 ಗಂಟೆಯಿಂದ ದಿನಾಂಕ 05/09/2025 ರ 10:00 ಗಂಟೆಯ ಮದ್ಯಾವಧಿಯಲ್ಲಿ ತೋಡಿನ ಬಳಿ ತುಂಡಾದ ವಿದ್ಯುತ್ ಸಂಪರ್ಕ ಇದ್ದ ವಿದ್ಯುತ್ ತಂತಿ ಎಡಕೈಗೆ ಹಾಗೂ ಮೈ ಕೈಗೆ ತಾಗಿ ವಿದ್ಯುತ್ ಶಾಕ್ ನಿಂದ ಅಲ್ಲಿಯೇ ಹರಿದು ಹೋಗುವ ನೀರಿನ ತೋಡಿಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇರುತ್ತದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 24/2025, ಕಲಂ:194 BNS ರಂತೆ ಪ್ರಕರಣ ದಾಖಲಾಗಿರುತ್ತದೆ.