ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, 11 ಮಂದಿಯನ್ನು ವಶಪಡಿಸಿಕೊಂಡಿದ್ದಾರೆ.
ಬ್ರಹ್ಮಾವರ ಪೊಲೀಸರು ಬಂಧಿತ ಆರೋಪಿಗಳಿಂದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 11 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಸೆಪ್ಟೆಂಬರ್ 5 ರಂದು ನೀಲಾವರ ಗ್ರಾಮದ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಮನೆಯಲ್ಲಿ ಹಣವನ್ನು ಪಣವನ್ನಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿಯಂತೆ ಅಶೋಕ್ ಮಾಳಾಬಗಿ, ಪೊಲೀಸ್ ಉಪನಿರೀಕ್ಷಕರು (ಕಾ ಸು & ಸಂಚಾರ), ಬ್ರಹ್ಮಾವರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಸಂಜೆ ರಾತ್ರಿ 7:30 ಗಂಟೆಗೆ ದಾಳಿ ನಡೆಸಿ 11 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಬಂಧಿತ ಆರೋಪಿಗಳಿಂದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಳಿ ವಿಚಾರಿಸಿದಾಗ ಅಂದರ್ ಬಾಹರ್ ಇಸ್ಫಿಟ್ ಜುಗಾರಿ ಆಡುತ್ತಿರುವ ಬಗ್ಗೆ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ.
ನಂತರ ಆರೋಪಿಗಳಿಂದ ಅಂದರ್-ಬಾಹರ್ ಆಟಕ್ಕೆ ಬಳಸಿದ ತಲಾ ಒಟ್ಟು ನಗದು ರೂ. ರೂ. 20,900/-, ಇಸ್ಪೀಟು ಎಲೆಗಳು-52, ಫೈಬರ್ ರೌಂಡ್ ಟೇಬಲ್-1, ಪ್ಲಾಸ್ಟಿಕ್ ಕುರ್ಚಿಗಳು-12, ಮೊಬೈಲ್ ಪೋನ್ ಗಳು -11, ಮೂರು ಕಾರುಗಳು ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ಸ್ವಾಧೀನ ಪಡೆದುಕೊಂಡಿರುತ್ತಾರೆ.










