ಕೋಟ: ಮಾನಸಿಕ ಖಾಯಿಲೆಯಿಂದ 20 ವರ್ಷಗಳಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದರು ಯಶೋದ ಎಂದು ತಿಳಿಯಲಾಗಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣ ವಿವರ : ಪಿರ್ಯಾದಿದಾರರಾದ ರಮ್ಯ (30) ಬೇಳೂರು ಗ್ರಾಮ, ಕುಂದಾಪುರ ಇವರ ತಾಯಿ ಯಶೋದ (56) ರವರು 20 ವರ್ಷ ದಿಂದ ಮಾನಸಿಕ ಖಾಯಿಲೆಯಿಂದ ಬಳಲು ತಿದ್ದವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಸಂಪೂರ್ಣ ಗುಣಮುಖವಾಗಿರಲಿಲಲ್ಲ. ಹೀಗಿರುತ್ತಾ ದಿನಾಂಕ 04/09/2025 ರಂದು ಬೆಳಿಗ್ಗೆ 09:00 ಗಂಟೆಗೆ ಪಿರ್ಯಾದಿದಾರರು ತನ್ನ ಮಗನನ್ನು ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಕೆಲಸಕ್ಕೆ ಹೋಗುವಾಗ ಮನೆಯಲ್ಲಿ ತಾಯಿ ಇದ್ದು ಬಳಿಕ ಸಂಜೆ 04:00 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ತಾಯಿ ಇರಲಿಲ್ಲ. ನೆರೆಕೆರೆಯವರೆಲ್ಲ ಸೇರಿ ಹುಡುಕಾಡಿದೆವು ಪತ್ತೆಯಾಗಿರಲಿಲ್ಲ. ದಿನಾಂಕ 05/09/2025 ರಂದು ಸಂಜೆ 04:30 ಗಂಟೆಗೆ ತಾಯಿಯನ್ನು ಹುಡುಕುತ್ತಿರುವಾಗ ಸಂಜೆ 04:30 ಗಂಟೆಗೆ ಶಿವರಾಮ ರವರ ಕೃಷಿ ಬಾವಿಯಲ್ಲಿ ಮೃತದೇಹ ತೇಲುತ್ತಿರುವುದು ಕಂಡು ಬಂದಿದ್ದು. ಪಿರ್ಯಾದಿದಾರರ ತಾಯಿ ತನಗಿರುವ ಮಾನಸಿಕ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 04/09/2025 ರಂದು ಬೆಳಿಗ್ಗೆ 09:00 ಗಂಟೆಯಿಂದ ದಿನಾಂಕ 05/09/2025 ರಂದು ಸಂಜೆ 04:30 ಗಂಟೆಯ ಮಧ್ಯಾವಧಿಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 47/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.