Home Crime ಮಲ್ಪೆ : ಬೀಚ್ ನಲ್ಲಿ ಪಾನಿ ಪೂರಿ ಅಂಗಡಿಯವರಿಗೆ ಹಾಗೂ ಪ್ರವಾಸಿಗರ ನಡುವೆ ಹೊಡೆದಾಟ…!!

ಮಲ್ಪೆ : ಬೀಚ್ ನಲ್ಲಿ ಪಾನಿ ಪೂರಿ ಅಂಗಡಿಯವರಿಗೆ ಹಾಗೂ ಪ್ರವಾಸಿಗರ ನಡುವೆ ಹೊಡೆದಾಟ…!!

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ನಲ್ಲಿ ಪಾನಿ ಪೂರಿ ಅಂಗಡಿಯವನಿಗೆ ಮತ್ತು ಪ್ರವಾಸಕ್ಕೆ ಬಂದ ಪ್ರವಾಸಿಗರ ನಡುವೆ ಜಗಳ ನಡೆದು ನಂತರ ಹೊಡೆದಾಟ ಸಂಭವಿಸಿದೆ.

ಈ ಘಟನೆ ಬಗ್ಗೆ ದೂರು ಪ್ರತಿದೂರು ದಾಖಲಾಗಿದೆ. ಮಲ್ಪೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಘಟನೆ ವಿವರ : ದಿನಾಂಕ : 10/06/2025ರಂದು ರಾತ್ರಿ 08:30 ಗಂಟೆಗೆ ಮಲ್ಪೆ ಬೀಚ್‌ ಬಳಿಯ ಪಾನಿ ಪೂರಿ ಅಂಗಡಿಯಲ್ಲಿ ಹೆಚ್ಚುವರಿಯಾಗಿ ಒಂದು ಪಾನಿ ಪೂರಿ ನೀಡುವ ವಿಷಯವಾಗಿ ಪ್ರವಾಸಕ್ಕೆ ಬಂದ ಮಂಡ್ಯ ಜಿಲ್ಲೆಯ ಪ್ರವಾಸಿಗರಿಗೆ ಮತ್ತು ಸ್ಥಳೀಯ ಪಾನಿ ಪುರಿ ಅಂಗಡಿಯವರಿಗೆ ಗಲಾಟೆಯಾಗಿ, ಬೈದಾಡಿಕೊಂಡಿದ್ದು, ಎರಡೂ ಕಡೆಯಿಂದ ಹಲ್ಲೆ ನಡೆಸಿರುತ್ತಾರೆ. ಈ ಬಗ್ಗೆ ದೂರು ಪ್ರತಿದೂರು ನೀಡಲಾಗಿದ್ದು ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 71/2025 ಕಲಂ: 189(2), 191(2), 191(3), 115(2), 118(1), 352, 351 (2) ಜೊತೆಗೆ 190 BNS ಮತ್ತು 72/2025, ಕಲಂ: 189(2),191(2), 191(3), 115(2), 118(1), 352, 351 (2) ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಎರಡು ಪ್ರಕರಣಗಳು ಕೇಸ್‌ ಕೌಂಟರ್‌ ಕೇಸ್‌ ಆಗಿದ್ದು, ಮೊದಲ ಪ್ರಕರಣದ ಆರೋಪಿಗಳಾದ 1.ಸುದೀಪ, 2.ಸಂಪತ್, 3.ಪುನೀತ, 4.ಮಹೇಶ, 5.ಕನ್ನ ವೈಜಿ 6.ಅರವಿಂದ ಹಾಗೂ ಎರಡನೇ ಪ್ರಕರಣದ ಆರೋಪಿಗಳಾದ 1.ರಮೇಶ 2.ಮೋನು 3.ವಿನೋದನನ್ನು ‌ದಸ್ತಗಿರಿ ಮಾಡಲಾಗಿರುತ್ತದೆ.