ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಕರ್ಕುಂಜೆ ಗ್ರಾಮದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಆಟ ಆಡುತ್ತಿರುವಾಗ ಮಾಹಿತಿ ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು 1)ಚಂದ್ರಶೇಖರ(52), ಬಿಜ್ರಿ, ಗುಲ್ವಾಡಿ ಗ್ರಾಮ, ಕುಂದಾಪುರ, 2) ಅಭಿಜಿತ್(33),ಮಾರಣಕಲಟ್ಟೆ, ಚಿತ್ತೂರು, ಕುಂದಾಪುರ, 3) ಸತೀಶ್ ಪೂಜಾರಿ(34), ಅರೆಶಿರೂರು, ಗೋಳಿಹೊಳೆ, ಬೈಂದೂರು, 4)ಗಣಪತಿ ವೀರಪ್ಪ ನಾಯ್ಕ್,( 34), ವೆಂಕಟಪುರ, ಭಟ್ಕಳ, ಉ.ಕ , 5)ಈಶ್ವರ ಹೊನ್ನಪ್ಪ ನಾಯ್ಕ್, (53), ದೇವಸ್ಥನದ ಎದುರುಗಡೆ, ಮುರ್ಡೇಶ್ವರ, ಭಟ್ಕಳ ತಾಲೂಕು, ಉ.ಕ, 6)ಸುಬ್ಬಣ್ಣ(57), ಆಲೂರು ಪೇಟೆ, ಆಲೂರು ಗ್ರಾಮ, ಕುಂದಾಪುರ 7)ಭಾಸ್ಕರ ಬೈರಪ್ಪ ನಾಯ್ಕ್, ( 38), ಶಾರದಹೊಳೆ, ಬೇಂಗ್ರೆ ಪೋಸ್ಟ, ಶಿರಾಲಿ ಗ್ರಾಮ, ಭಟ್ಕಳ, 8). ಮಂಜುನಾಥ, ( 58 )ಹಳದಿಪುರ, ಮುಖ್ಯ ರಸ್ತೆ, ಹೊನ್ನಾವರ ತಾಲೂಕು, ಉ.ಕ, 9)ಸುರೇಶ ವೀರಪ್ಪ ನಾಯ್ಕ್, ( 42), ಚಿತ್ರಾಪುರ ಮಠದ ಹಿಂದೆ, ಚಿತ್ರಾಪುರ ಪೋಸ್ಟ್, ಭಟ್ಕಳ, ಉ.ಕ, 10)ವಿಜಯ, ( 45 ) ನಾಕಟ್ಟೆ, ಬೈಂದೂರು ತಾಲೂಕು, 11). ನಿತೇಶ್ (26) ಎಂದು ಗುರುತಿಸಲಾಗಿದೆ.
ಕುಂದಾಪುರ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ: 05.09.2025 ರಂದು ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಮುಕ್ಕೋಡು ರಾಜೀವ ಶೆಟ್ಟಿ ಎಂಬವರ ಕ್ಯಾಟರಿಂಗ್ ಶೆಡ್ ನಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆಂದು ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಸದ್ರಿ ಸ್ಥಳಕ್ಕೆ 18:30 ಗಂಟೆಗೆ ಭೀಮಾಶಂಕರ ಸಿನ್ನೂರ ಸಂಗಣ್ಣ, ಪೊಲೀಸ್ ಉಪನಿರೀಕ್ಷಕರು(ಕಾ&ಸು), ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಆರೋಪಿಗಳಾದ
1)ಚಂದ್ರಶೇಖರ(52), ಬಿಜ್ರಿ, ಗುಲ್ವಾಡಿ ಗ್ರಾಮ, ಕುಂದಾಪುರ, 2) ಅಭಿಜಿತ್(33),ಮಾರಣಕಲಟ್ಟೆ, ಚಿತ್ತೂರು, ಕುಂದಾಪುರ, 3) ಸತೀಶ್ ಪೂಜಾರಿ(34), ಅರೆಶಿರೂರು, ಗೋಳಿಹೊಳೆ, ಬೈಂದೂರು, 4)ಗಣಪತಿ ವೀರಪ್ಪ ನಾಯ್ಕ್,( 34), ವೆಂಕಟಪುರ, ಭಟ್ಕಳ, ಉ.ಕ , 5)ಈಶ್ವರ ಹೊನ್ನಪ್ಪ ನಾಯ್ಕ್, (53), ದೇವಸ್ಥನದ ಎದುರುಗಡೆ, ಮುರ್ಡೇಶ್ವರ, ಭಟ್ಕಳ ತಾಲೂಕು, ಉ.ಕ, 6)ಸುಬ್ಬಣ್ಣ(57), ಆಲೂರು ಪೇಟೆ, ಆಲೂರು ಗ್ರಾಮ, ಕುಂದಾಪುರ 7)ಭಾಸ್ಕರ ಬೈರಪ್ಪ ನಾಯ್ಕ್, ( 38), ಶಾರದಹೊಳೆ, ಬೇಂಗ್ರೆ ಪೋಸ್ಟ, ಶಿರಾಲಿ ಗ್ರಾಮ, ಭಟ್ಕಳ, 8). ಮಂಜುನಾಥ, ( 58 )ಹಳದಿಪುರ, ಮುಖ್ಯ ರಸ್ತೆ, ಹೊನ್ನಾವರ ತಾಲೂಕು, ಉ.ಕ, 9)ಸುರೇಶ ವೀರಪ್ಪ ನಾಯ್ಕ್, ( 42), ಚಿತ್ರಾಪುರ ಮಠದ ಹಿಂದೆ, ಚಿತ್ರಾಪುರ ಪೋಸ್ಟ್, ಭಟ್ಕಳ, ಉ.ಕ, 10)ವಿಜಯ, ( 45 ) ನಾಕಟ್ಟೆ, ಬೈಂದೂರು ತಾಲೂಕು, 11). ನಿತೇಶ್ (26) ಹೇರಿಕುದ್ರು, ಆನಗಳ್ಳಿ ಗ್ರಾಮ, ಕುಂದಾಪುರ ಎಂಬವರನ್ನು ವಶಕ್ಕೆ ಪಡೆದು ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ಒಟ್ಟು 1,10,790/- ರೂಪಾಯಿ, ಇಸ್ಪೀಟ್ ಎಲೆಗಳು, ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ರೌಂಡ್ ಟೇಬಲ್-2, ಪ್ಲಾಸ್ಟಿಕ್ ಕುರ್ಚಿ-07, ಕಬ್ಬಿಣದ ಕುರ್ಚಿ-10, ಆಪಾದಿತರು ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ಮೊಬೈಲ್-12, ಆಪಾದಿತರು ಇಸ್ಪೀಟ್ ಜುಗಾರಿ ಆಟ ಆಡಲು ಬಂದಿದ್ದ ವಾಹನಗಳಾದ KA20EP6665 ನೇ ಸ್ಕೂಟರ್, KA47A5600 Ertiga ಕಾರು, KA20MD8270 Kia selto ಕಾರು, KA20MD 1580 Kia selto ಕಾರುಗಳನ್ನು ಸ್ವಾದೀನಪಡಿಸಿಕೊಂಡ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ :57/ 2025 ಕಲಂ: 79, 80 KP Act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.










