ಕೋಟ: ಉಡುಪಿ ಜಿಲ್ಲೆಯ ಕೋಟ ಸಮೀಪ ವ್ಯಕ್ತಿಯೊಬ್ಬರಿಗೆ ಅಂಬ್ಯುಲೆನ್ಸ್ ವೊಂದು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದವರು ಇಂದು ಮೃತಪಟ್ಡಿದ್ದಾರೆ.
ಸಾವನ್ನಪ್ಪಿದ ವ್ಯಕ್ತಿ ರಾಮೇಶ್ ರಾವ್ ಎಂದು ತಿಳಿಯಲಾಗಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ವಿವರ : ಪಿರ್ಯಾದಿದಾರ (34) ಚಿತ್ರಪಾಡಿ ಸಾಲಿಗ್ರಾಮ ಇವರ ತಂದೆ ಕೆ.ರಮೇಶ ರಾವ್ ಪ್ರಾಯ 73 ವರ್ಷ ರವರು ದಿನಾಂಕ:13.05.2025 ರಂದು ಬೆಳಿಗ್ಗೆ 6.50 ಗಂಟೆ ಸಮಯಕ್ಕೆ ಚಿತ್ರಪಾಡಿ ಬೆಲ್ಲದ ಗಣಪತಿ ದೇವಸ್ಥಾನದ ಎದುರು ಕುಂದಾಪುರ –ಉಡುಪಿ ರಾಹೆ 66 ರ ರಸ್ತೆಯ ಎಡಬದಿ ನಿಂತುಕೊಂಡಿರುವಾಗ KA.25.D.2633ನೇ ಅಂಬ್ಯುಲೆನ್ಸ್ ವಾಹನ ಡಿಕ್ಕಿ ಹೊಡೆದು ತಲೆಗೆ ಹಾಗೂ ಕೈಕಾಲುಗಳಿಗಗೆ ತೀವ್ರ ತರದ ಗಾಯವಾಗಿ ಮಹೇಶ ಆಸ್ಪತ್ರೆ ಹಾಗೂ ಕೆ.ಎಂ.ಸಿ ಆಸ್ಪತ್ರೆ ಚಿಕಿತ್ಸೆ ಪಡೆದಿರುತ್ತಾರೆ. ದಿನಾಂಕ:28.08.2025 ರಂದು ಕೋಮಾಸ್ಥಿತಿಯಲ್ಲಿದ್ದು ಈ ದಿನ ದಿನಾಂಕ:08.09.2025 ರಂದು ಸಂಜೆ 5.00 ಗಂಟೆ ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಕೋಟ ಠಾಣಾ ಯುಡಿಆರ್ ಕ್ರಮಾಂಕ 49/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.