ಉಡುಪಿ : ರೋಟರಿ ಉಡುಪಿಯಿಂದ ವೈದ್ಯರ ದಿನಾಚರಣೆ, ಚಾರ್ಟರ್ಡ್ ಅಕೌಂಟೆಂಟ್ಸ್ ದಿನಾಚರಣೆ ಮತ್ತು ಪತ್ರಕರ್ತರ ದಿನಾಚರಣೆಯನ್ನು ಆಚರಿಸಲಾಯ್ತು. ಈ ಸಂದರ್ಭದಲ್ಲಿ ಉಡುಪಿಯ ಶ್ರೀ ಡೆಂಟಲ್ ಕ್ಲಿನಿಕ್‌ನ ಖ್ಯಾತ ದಂತ ವೈದ್ಯರಾದ ಡಾ. ಅರ್ಚನಾ, ಉಡುಪಿಯ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಆದ ಸಿಎ ಕವಿತಾ ಎಮ್. ಪೈ ಮತ್ತು ಉಡುಪಿಯ ಪ್ರಸಿದ್ಧ ಡಿಜಿಟಲ್ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಪತ್ರಕರ್ತರಾದ ಶ್ರೀ ಶಿವಪ್ರಸಾದ್ ಎನ್. ರಾವ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 2026-27ನೇ ಸಾಲಿನ ಸೇವಾ ಯೋಜನೆಗಳ ಉದ್ಘಾಟನೆಯನ್ನು ಡಿಜಿ ಮೇಜರ್ ಡೋನರ್ ಬಿ. ಎಮ್. ಭಟ್ ಅವರು ನೇರವೇರಿಸಿದರು. ಸಂಸ್ಥೆಯ ಸೇವಾ ಯೋಜನೆಯಲ್ಲಿ ಉಡುಪಿಯ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ 21 ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವ ಮತ್ತು ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದ ಮಕ್ಕಳಿಗೆ ಉಚಿತ ಸಮವಸ್ತ್ರಗಳನ್ನು ವಿತರಿಸುವ ಕಾರ್ಯಕ್ರಮ ವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ವನಿತಾ ಉಪಾಧ್ಯಾಯ ರಿಂದ ಪ್ರಾರ್ಥನೆಯ ನಂತರ ಅದ್ಯಕ್ಷ ರೋ.ಗೋಪಾಲಕೃಷ್ಣ ಪ್ರಭು ಅವರು ಎಲ್ಲರನ್ನು ಸ್ವಾಗತಿಸಿದರು. ಸಹಾಯಕ ಗವರ್ನರ್ ರೋ. ಹೇಮಂತ ಯು ಕಾಂತ್, ವಲಯ ಸೇನಾನಿ ರೋ. ದೀಕ್ಷೀತ್ ಶೆಟ್ಟಿ, ಗತ ವರ್ಷದ ಅದ್ಯಕ್ಷ ರೋ.ಸೂರಜ್ ಅವರು ಶುಭ ಹಾರೈಸಿದರು. ಜಿ ಎಸ್ ಟಿ ದಿನದ ಅಂಗವಾಗಿ ರೋ. ಬಿ.ಎಂ.ಭಟ್ ಮತ್ತು ರೋ. ಜಗದೀಶ ಕಾಮತ್ ರನ್ನು ಅಭಿನಂದಿಸಲಾಯ್ತು. ಕ್ಲಬ್ ನ ಸದಸ್ಯ ಡಾಕ್ಟರರುಗಳನ್ನು ಅಭಿನಂದಿಸಲಾಯ್ತು. ಗತ ವರ್ಷದ ಕಾರ್ಯದರ್ಶಿ ರೋ. ಅಶೋಕ ಕೋಟ್ಯಾನ್ ಮತ್ತು ಕ್ಲಬ್ ಸರ್ವೀಸ್ ಡೈರೆಕ್ಟರ್ ರೋ. ಗುರುರಾಜ ಭಟ್ ರು ಸಹಕರಿಸಿದರು. ಕಾರ್ಯದರ್ಶಿ ರೋ. ಗಣಪತಿ ಪ್ರಭು ಧನ್ಯವಾದ ನೀಡಿದರು. ರೋ.ಡಾ. ಸುದರ್ಶನ್ ಭಟ್ ರು ಕಾರ್ಯಕ್ರಮ ನಿರ್ವಹಣೆ ಮಾಡಿದರು.




