Home Crime ಅಕ್ರಮ ಕೆಂಪು ಕಲ್ಲು ಸಾಗಾಟ : ಚಾಲಕ ಹಾಗೂ ಲಾರಿ‌ ವಶಕ್ಕೆ…!!

ಅಕ್ರಮ ಕೆಂಪು ಕಲ್ಲು ಸಾಗಾಟ : ಚಾಲಕ ಹಾಗೂ ಲಾರಿ‌ ವಶಕ್ಕೆ…!!

ಕೊಣಾಜೆ : ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ ಸಮೀಪ ಅಕ್ರಮವಾಗಿ ಈಚರ್ ಲಾರಿ‌ ಕೆಂಪು ಕಲ್ಲು ಸಾಗಾಟ ಮಾಡುತ್ತಿರುವಾಗ ಪೊಲೀಸರು  ಚಾಲಕ ಹಾಗೂ ಲಾರಿ‌ ವಶಪಡಿಸಿಕೊಂಡಿದ್ದಾರೆ.

ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ : ದಿನಾಂಕ: 26.08.2025 ರಂದು ಪಿರ್ಯಾದಿದಾರರಾದ ಪಿಎಸ್ ಐ ನಾಗರಾಜ್ ಎಸ್ ರವರು ಸಿಬ್ಬಂದಿಯವರ ಜೊತೆಯಲ್ಲಿ ಇಲಾಖಾ ವಾಹನ ಸಂಖ್ಯೆ: ಕೆಎ-19-ಜಿ-0619 ನೇದರಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಗ್ಗೆ 10.00 ಗಂಟೆಗೆ ಪಜೀರು ಗ್ರಾಮದ ಕಂಬ್ಲಪದವು ಎಂಬಲ್ಲಿ ಕೆಎ-70- 8497 ನಂಬ್ರದ ಈಚರ್ ಲಾರಿಯಲ್ಲಿ ಆರೋಪಿಯು ಕೇರಳ ರಾಜ್ಯದ ಆನೆಕಲ್ಲು ಎಂಬಲ್ಲಿಂದ 300 ಕೆಂಪು ಕಲ್ಲನ್ನು ತುಂಬಿಸಿ ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿದ್ದುದ್ದನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸ್ವಾಧೀನಪಡಿಸಿದ ಕೆಂಪು ಕಲ್ಲಿನ ಮೌಲ್ಯವು ಅಂದಾಜು 6500/- ರೂಪಾಯಿ ಆಗಿದ್ದು, ಕೆಂಪು ಕಲ್ಲು ಸಾಗಾಟ ಮಾಡಲು ಉಪಯೋಗಿಸಿದ ಈಚರ್ ಲಾರಿಯ ಮೌಲ್ಯವು ಅಂದಾಜು 250000/- ರೂ ಆಗಿರುತ್ತದೆ. ಆರೋಪಿಯು ಸರ್ಕಾರಕ್ಕೆ ಯಾವುದೇ ರಾಜಧನವನ್ನು ಪಾವತಿಸದೇ ಅಕ್ರಮವಾಗಿ ಕೆಂಪು ಕಲ್ಲನ್ನು ಕಳವು ಮಾಡಿ ಸಾಗಾಟ ಮಾಡಿರುವುದರಿಂದ ಆರೋಪಿ ಮತ್ತು ವಾಹನದ ಮಾಲಕರ ವಿರುದ್ದ ಕ್ರಮ ಕೈಗೊಂಡಿರುವುದಾಗಿ ಎಂಬಿತ್ಯಾದಿ