Home Crime ಉಡುಪಿ : ಕ್ಯಾಂಪಾ ಕೋಲಾ ವೆಬ್ ಸೈಟ್ ಮಾಡಿ ಆನ್ ಲೈನ್ ನಲ್ಲಿ ವಂಚನೆ :...

ಉಡುಪಿ : ಕ್ಯಾಂಪಾ ಕೋಲಾ ವೆಬ್ ಸೈಟ್ ಮಾಡಿ ಆನ್ ಲೈನ್ ನಲ್ಲಿ ವಂಚನೆ : ಇಬ್ಬರು ಅರೆಸ್ಟ್…!!

ಉಡುಪಿ : ನಗರದ ಜಿಲ್ಲಾ ಸೆನ್ ಠಾಣಾ ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆಯಿಂದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೂ ನಗದು, ಮೊಬೈಲ್ ಮತ್ತು ಲ್ಯಾಪ್ ಟಾಪ್ ಸೇರಿ ಒಟ್ಟು ರೂ, 6,15,000/- ನ ಸೊತ್ತುಗಳನ್ನು ಸ್ವಾಧೀನಪಡಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ದೇವ್ ಹರ್ಷ ಮತ್ತು ಚಂದನ್ ಕುಮಾರ್ ಎಂದು ಗುರುತಿಸಲಾಗಿದೆ.

ಪಿರ್ಯಾದಿ ಅವಿನಾಶ್ ಇವರು ರಿಲಯನ್ಸ್‌ ಇಂಡಸ್ಟ್ರೀ ಮಾಲಕತ್ವದ ಕ್ಯಾಂಪಾ ಕೋಲಾ ಪ್ರಾಂಚೈಸ್‌ ಗೆ campacolabusiness.com ವೆಬ್‌ಸೈಟ್‌ ಮೂಖಾಂತರ ಅರ್ಜಿ ಸಲ್ಲಿಸಿದ್ದು, ಕೆಲವು ದಿನಗಳಲ್ಲಿ ಪಿರ್ಯಾದಿದಾರರಿಗೆ ಮೇಲ್‌ ಮುಖಾಂತರ ಹಾಗೂ ಪೋನ್ ಮುಖಾಂತರ ಹೆಚ್ಚಿನ ಮಾಹಿತಿಗಾಗಿ ಹಾಗೂ ದಾಖಲಾತಿಗಾಗಿ ಕರೆ ಬಂದಿದ್ದು, ಪಿರ್ಯಾದಿದಾರರು ವಿದ್ಯಾಭ್ಯಾಸದ ದಾಖಲಾತಿ, ಬ್ಯಾಂಕ್‌ ಸ್ಟೇಟ್‌ಮೆಂಟ್‌ ಹಾಗೂ ಆಧಾರ್‌ಕಾರ್ಡ್‌ ದಾಖಲಾತಿಗಳನ್ನು ಕಳುಹಿಸಿದ್ದು, ಆಗ ಅವರು ಪ್ರಾಂಚೈಸ್‌ ಅರ್ಜಿ ಸಲ್ಲಿಕೆ ಆಗಿರುವುದಾಗಿ ತಿಳಿಸಿದ್ದು, ಆರೋಪಿತರು ತಿಳಿಸಿದಂತೆ ಪಿರ್ಯಾದಿದಾರರು ರಿಜಿಸ್ಟೇಷನ್, ಪ್ರೋಡಕ್ಟ್‌ ಬುಕಿಂಗ್‌ಗೆ ಹಂತ ಹಂತವಾಗಿ ರೂ, 5,72,500/- ಹಣವನ್ನು ಅಪರಿಚಿತರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿರುತ್ತಾರೆ. ಆರೋಪಿತರು ಪುನಃ ಪುನಃ ಹಣ ಹಾಕುವಂತೆ ಒತ್ತಾಯಿಸುತ್ತಿದ್ದು, ಇದರಿಂದ ಪಿರ್ಯಾದಿದಾರರಿಗೆ ಸಂಶಯ ಉಂಟಾಗಿದ್ದು, ಆರೋಪಿತರು ಪಿರ್ಯಾದಿದಾರರಿಗೆ ಕ್ಯಾಂಪಾ ಕೋಲಾ ಪ್ರಾಂಚೈಸಿಯನ್ನು ಕೊಡುವುದಾಗಿ ನಂಬಿಸಿ ಒಟ್ಟು 5,72,500/- ಹಣ ಪಡೆದುಕೊಂಡು ಈ ವರೆಗೆ ಪ್ರಾಂಚೈಸಿ ಕೊಡದೇ, ಹಾಕಿದ ಹಣವನ್ನು ವಾಪಾಸು ಕೊಡದೇ ಮೋಸ ಮಾಡಿರುತ್ತಾರೆ ಈ ಬಗ್ಗೆ ಅವಿನಾಶ್‌ ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 43/2025 ಕಲಂ 66(ಸಿ) 66(ಡಿ) ಐ.ಟಿ. ಆಕ್ಟ್ ಮತ್ತು 318(4) ಬಿಎನ್‌ಎಸ್‌ ಆಕ್ಟ್‌ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆ ಆರಂಭಿಸಿದ ಸಹಾಯಕ ಪೊಲೀಸ್‌ ಉಪಾಧೀಕ್ಷಕರಾದ ಡಾ. ಹರ್ಷ ಪ್ರಿಯಂವದರವರ ನೇತೃತ್ವದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ನಿಲೇಶ್ ಜಿ ಚವ್ಹಾಣ್, ಪೊಲೀಸ್ ಉಪನಿರೀಕ್ಷಕರಾದ ಅಶೋಕ್ ಕುಮಾರ್, ಸೈಬರ್ ಕ್ರೈಂ ಪೊಲೀಸ್ ಠಾಣಾ ಸಿಬ್ಬಂದಿಗಳಾದ ರಾಘವೇಂದ್ರ ಕಾರ್ಕಡ , ಪ್ರವೀಣ್‌ ಕುಮಾರ್‌, ಪ್ರವೀಣ ಶೆಟ್ಟಿಗಾರ್‌, ರಾಜೇಶ್, ದೀಕ್ಷಿತ್‌, ಎ.ಎಸ್.ಐ, ಉಮೇಶ್ ಜೋಗಿ, ಯತೀನ್‌, ವೆಂಕಟೇಶ್ , ಧರ್ಮಪ್ಪ , ಹೇಮರಾಜ್ , ನಿಲೇಶ್, ಪವನ್ ಹಾಗೂ ದಿನೇಶ್ ಅಜೆಕಾರು ಠಾಣೆ ಅವರನ್ನೊಳಗೊಂಡ ವಿಶೇಷ ತಂಡವು ಬಿಹಾರ ರಾಜ್ಯದ ಪಾಟ್ನಾ ಮತ್ತು ಬೆಂಗಳೂರುನಲ್ಲಿ ಕಾರ್ಯಚರಣೆ ನಡೆಸಿ ಆರೋಪಿಗಳಾದ 1)ದೇವ್‌ ಹರ್ಷ(20), ತಂದೆ : ನಾಗಮನಿ ಕುಮಾರ ಪಾಂಡೆ, ವಾಸ : ಶಿವಂ ಹೌಸ್, ಡಾ. ಆರ್. ಕೆ. ರಾಜೇಶ್ ಕ್ಲಿನಿಕ್ ಹತ್ತಿರ, ರೈಲ್ವೆ ಸ್ಟೇಷನ್ ರೋಡ್, ಫತವ, ಫತವಾ ತಾಲ್ಲೂಕು ಪಟ್ನಾ ಜಿಲ್ಲೆ ಬಿಹಾರ ರಾಜ್ಯ (ಬಾಡಿಗೆ ಮನೆ), ಪ್ರಸ್ತುತ ವಿಳಾಸ : ಬಕೌರ್ ಗ್ರಾಮ, ಪೈಠಾನ್ ಅಂಚೆ, ಇಸ್ಲಾಂಪುರ ತಾಲ್ಲೂಕು ನಳಂದಾ ಜಿಲ್ಲೆ ಬಿಹಾರ ರಾಜ್ಯ.
ಚಂದನ ಕುಮಾರ್‌ (29) ತಂದೆ : ಬಿರೇಂದ್ರ ಯಾದವ ವಾಸ : ಮನೆ ನಂಬ್ರ 28, ಬರಲಗಾಂವ ಗ್ರಾಮ ಇಸ್ಲಾಂಪುರ ಅಂಚೆ ಮತ್ತು ತಾಲ್ಲೂಕು, ನಳಂದಾ ಜಿಲ್ಲೆ ಬಿಹಾರ ರಾಜ್ಯ. (ಪ್ರಸ್ತುತ ವಿಳಾಸ) : ಗಂಗಾಜಲ ಆಸ್ಪತ್ರೆ ಹತ್ತಿರ, ಬಜಾರ್ ಸಮಿತಿ, ಪಟ್ನಾ, ಪಟ್ನಾ ಜಿಲ್ಲೆ, ಬಿಹಾರ ರಾಜ್ಯ ಇವರನ್ನು ದಸ್ತಗಿರಿ ಮಾಡಲಾಗುತ್ತದೆ.

ಆರೋಪಿಗಳಿಂದ 10 ಮೊಬೈಲ್ ಪೋನ್ . ಅಂದಾಜು ಮೌಲ್ಯ ರೂ, 97,000/- , 4 ಲ್ಯಾಪ್ ಟಾಪ್ , ಅಂದಾಜು ಮೌಲ್ಯ ರೂ, 68,000/- ,ನಗದು ರೂ, 4,50,000/- ವಶಪಡಿಸಿಕೊಳ್ಳಲಾಗಿದೆ.