Home Crime ವಿವಾಹ ನಿಶ್ವಯವಾಗಿದ್ದ ಯುವಕ ಮೃತ್ಯು : ಮನನೊಂದ ಯುವತಿ ಆತ್ಮಹತ್ಯೆ…!

ವಿವಾಹ ನಿಶ್ವಯವಾಗಿದ್ದ ಯುವಕ ಮೃತ್ಯು : ಮನನೊಂದ ಯುವತಿ ಆತ್ಮಹತ್ಯೆ…!

ಕುಂಬಳೆ: ವಿವಾಹ ನಿಶ್ವಯವಾಗಿದ್ದ ಯುವಕ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳೆ ಸಮೀಪದ ಕುಂಟಗೇರಡ್ಕ ಎಂಬಲ್ಲಿ ನಡೆದಿದೆ.

ಕುಂಟಗೇರಡ್ಕದ ಜನಾರ್ದನ ಎಂಬವರ ಪುತ್ರಿ ಪ್ರಫುಲ್ಲಾ(26) ಮೃತಪಟ್ಟವರು ಎಂದು ತಿಳಿಯಲಾಗಿದೆ.

ತಮಿಳುನಾಡು ಮೂಲದ ಮಣಿ ಎಂಬ ಯುವಕನ ಜೊತೆ ನಾಲ್ಕು ತಿಂಗಳ ಹಿಂದೆ ಪ್ರಫುಲ್ಲಾರಿಗೆ ವಿವಾಹ ನಿಶ್ಚಯವಾಗಿತ್ತು. ತಿಂಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಣಿ, ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಇದಾದ ಬಳಿಕ ಪ್ರಫುಲ್ಲಾ ಮಾನಸಿಕವಾಗಿ ಕುಗ್ಗಿದ್ದರು.