Home Crime ಮಂಗಳೂರು : ಗಾಂಜಾ ಮಾರಾಟ : ಆರೋಪಿಯ ಬಂಧನ…!!

ಮಂಗಳೂರು : ಗಾಂಜಾ ಮಾರಾಟ : ಆರೋಪಿಯ ಬಂಧನ…!!

ಮಂಗಳೂರು : ನಗರದ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಸುನೀಲ್ ಎಂದು ತಿಳಿದು ಬಂದಿದೆ.

ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಸಹಿತ ಸೊತ್ತುಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ದಿನಾಂಕ: 01-09-2025 ರಂದು ಸಂಜೆ:4-00 ಗಂಟೆಗೆ ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ವಿನಾಯಕ ರವರಿಗೆ ಬಾತ್ಮೀದಾರರೊಬ್ಬರಿಂದ ಮಂಗಳೂರು ನಗರದ ಸುಲ್ತಾನ್ ಭತ್ತೇರಿ ಎಂಬಲ್ಲಿ ಒಬ್ಬ ವ್ಯಕ್ತಿಯು KA-19 HJ1184 ನೇ ಬಿಳಿ ಬಣ್ಣದ ಸ್ಕೂಟರ್ ನಲ್ಲಿ ಅಕ್ರಮವಾಗಿ ಗಾಂಜಾ ಎಂಬ ಮಾದಕ ವಸ್ತುವನ್ನು ಇಟ್ಟು ಕೊಂಡು ಮಾರಾಟ ಮಾಡಲು ಬರುತ್ತಿದ್ದಾನೆಂದು ಮಾಹಿತಿ ಬಂದಂತೆ ಸಂಜೆ 7-15 ಗಂಟೆಗೆ ದಾಳಿ ನಡೆಸಿದಾಗ ಆರೋಪಿ ಸುನೀಲ್ ನು ಎನ್.ಡಿ.ಪಿ.ಎಸ್ ಕಾಯ್ದೆಯನ್ನು ಉಲ್ಲಂಘಿಸಿ ಅಕ್ರಮ ಲಾಭ ಗಳಿಸಲು ಯಾವುದೇ ಪರವಾನಿಗೆ ಇಲ್ಲದೇ ಆರೋಗ್ಯಕ್ಕೆ ಹಾನಿಕಾರಕವಾದ ಒಟ್ಟು 1 ಕೆಜಿ 394 ಗ್ರಾಂ ತೂಕದ ವಾಣಿಜ್ಯ ಪ್ರಮಾಣದ ನಿಷೇದಿತ ಗಾಂಜಾ ಎಂಬ ಮಾಧಕ ವಸ್ತುವನ್ನು ಅಕ್ರಮವಾಗಿ ವಶದಲ್ಲಿರಿಸಿಕೊಂಡು ಮಾರಾಟ ಮಾಡಲು ತಂದಿರುವುದು ಪತ್ತೆಯಾಗಿದ್ದು, ಆರೋಪಿತನು ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಅಪರಾಧ ಎಸಗಿದ್ದು, ದಾಳಿ ನಡೆಸಿ ಆರೋಪಿಯನ್ನು ಮತ್ತು ವಶಪಡಿಸಿಕೊಂಡ ಸೊತ್ತುಗಳಾದ (1) 25 ಗ್ರಾಂ ತೂಕದ ಗಾಂಜಾ ಪ್ಯಾಕೇಟ್-3, (2) 431 ಗ್ರಾಂ ತೂಕ ಗಾಂಜಾ (3) 888 ಗ್ರಾಂ ತೂಕದ ಗಾಂಜಾ (4) ಖಾಕಿ ಬಣ್ಣದ ಗಮ್ ಟೆಪ್ ನಿಂದ ಸುತ್ತಿದ ಪ್ಯಾಕೇಟ್-1 (5) ಡಿಜಿಟಲ್ ತೂಕ ಮಾಪನ (6) ಪಾರದರ್ಶಕ ಜಿಪ್ ಲಾಕ್ ಕವರ್ ಗಳು-6 (7) ರೂ. 500/- ನಗದು ಹಣ (8) ನೀಲಿ ಬಣ್ಣದ ಪರ್ಸ್-1, (9) KA-19 HJ1184 ನೇ ಬಿಳಿ ಬಣ್ಣದ ಸ್ಕೂಟರ್ -1 ಗಳನ್ನು ವಶಪಡಿಸಿಕೊಂಡು, ಆರೋಪಿ ಸುನೀಲ್ ಎಂಬಾತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿ ಸಾರಾಂಶ ವಾಗಿರುತ್ತದೆ.