Home Crime ಉಳ್ಳಾಲ : ಮಾದಕವಸ್ತು ಮಾರಾಟ : ಇಬ್ಬರು ಅರೆಸ್ಟ್…!!

ಉಳ್ಳಾಲ : ಮಾದಕವಸ್ತು ಮಾರಾಟ : ಇಬ್ಬರು ಅರೆಸ್ಟ್…!!

ಉಳ್ಳಾಲ : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪ ಉಳ್ಳಾಲದಲ್ಲಿ ಇಬ್ಬರು ವ್ಯಕ್ತಿಗಳು ಸ್ಕೂಟರ್ ನಲ್ಲಿ ಅಕ್ರಮವಾಗಿ ಮಾದಕವಸ್ತುವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಫಜಲ್ ಹುಸೇನ್ ಹಾಗೂ ನೌಶಾದ್ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಉಳ್ಳಾಲ ಪೊಲೀಸರು ಸೊತ್ತುಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

ಪ್ರಕರಣದ ಸಾರಾಂಶ : ದಿನಾಂಕ 01/09/2025 ರಂದು ಸಂಜೆ ಹೊತ್ತಿಗೆ ತಲಪಾಡಿ ಗ್ರಾಮದ ತಚ್ಚಣಿ ಗ್ರೌಂಡ್‌ನಲ್ಲಿ ಆರೋಪಿಗಳಾದ ಫಜಲ್ ಹುಸೇನ್ ಹಾಗೂ ನೌಶಾದ್ ರವರುಗಳು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ತಮ್ಮ ವಶದಲ್ಲಿರಿಸಿಕೊಂಡಿರುವ ಮಾದಕ ವಸ್ತುವನ್ನು ಕೆಎ-19- ಹೆಚ್‌ಕೆ-5473 ನೇ ನಂಬರಿನ ಡಿಯೋ ಸ್ಕೂಟರ್‌ನಲ್ಲಿ ಬಂದು ಗಿರಾಕಿಗಳಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ದೊರೆತ ಮಾಹಿತಿ ಮೇರೆಗೆ ಪರ್ಯಾ‌ದಿದಾರರಾದ ಸಿದ್ದಪ್ಪ ಮಾರುತಿ ನರನೂರ ಪಿಎಸ್‌ಐ ಉಳ್ಳಾಲ ಠಾಣೆರವರು ಸಿಬ್ಬಂದಿಗಳೊಂದಿಗೆ ಸಂಜೆ 6-45 ಗಂಟೆಗೆ ಸ್ಥಳಕ್ಕೆ ದಾಳಿ ನಡೆಸಿ, ಪ್ರಕರಣವನ್ನು ಪತ್ತೆ ಹಚ್ಚಿ, ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ಆರೋಪಿಗಳ ವಶದಿಂದ ದೊರೆತ ಸೊತ್ತುಗಳಾದ 1) ಕಪ್ಪು ಬಣ್ಣದ SAMSUNG ಕಂಪೆನಿಯ SAMSUNG GALAXY MO4 ಮೊಬೈಲ್ ಫೋನ್-1, ಇದರ ಅಂದಾಜು ಮೌಲ್ಯ ರೂಪಾಯಿ 10.000/- 2) ಸುಮಾರು 10 ಗ್ರಾಂ ತೂಕದ ನಿಷೇದಿತ ಮಾದಕ ವಸ್ತು ಬಿಳಿ ಬಣ್ಣದ ಎಂಡಿಎAಎ ಕ್ರಿಸ್ಟೆಲ್ ಪ್ಯಾಕ್-1 ಇದರ ಅಂದಾಜು ಮೌಲ್ಯ ರೂಪಾಯಿ 30.000/- 3) ಸುಮಾರು 5 ಗ್ರಾಂ ತೂಕದ ನಿಷೇದಿತ ಮಾದಕ ವಸ್ತು ಬಿಳಿ ಬಣ್ಣದ ಎಂಡಿಎAಎ ಕ್ರಿಸ್ಟೆಲ್ ಪ್ಯಾಕ್-1 ಅಂದಾಜು ಮೌಲ್ಯ ರೂಪಾಯಿ 15.000/- 4) ನೀಲಿ ಬಣ್ಣದ REDMI ಕಂಪೆನಿಯ REDMI NOTE 7 ಮಾಡೆಲ್‌ನ ಮೊಬೈಲ್ ಫೋನ್-1 , ಅಂದಾಜು ಮೌಲ್ಯ ರೂಪಾಯಿ 10.000/- 5) ಸಿಲ್ವರ್ ಬಣ್ಣದ ಎಲೆಕ್ಟಾçನಿಕ್ ಪೋರ್ಟಬಲ್ ತೂಕದ ಯಂತ್ರ-1 ಅಂದಾಜು ಮೌಲ್ಯ ರೂಪಾಯಿ 500/- 6) ಜಿಪ್‌ಲಾಕ್ ಪ್ಲಾಸ್ಟಿಕ್ ಕವರ್‌ಗಳು-15 7) ಕೆಎ-19- ಹೆಚ್‌ಕೆ-5473 ನೇ ನಂಬರಿನ ಡಿಯೋ ಸ್ಕೂಟರ್-1 ಅಂದಾಜು ಮೌಲ್ಯ ರೂಪಾಯಿ 30.000/- ಈ ಎಲ್ಲಾ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 95.500/- ಆಗಿದ್ದು ಸದ್ರಿ ಸೊತ್ತುಗಳನ್ನು ಮಹಜರು ಮುಖೇನ ಸ್ವಾದೀನಪಡಿಸಿಕೊಂಡು ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ಸಾರಾಂಶ.