Home Karavali Karnataka ಬನ್ನಂಜೆ ನಾರಾಯಣ ಗುರು ವೃತ್ತ ಪುನರ್ ಸ್ಥಾಪನೆ…!!

ಬನ್ನಂಜೆ ನಾರಾಯಣ ಗುರು ವೃತ್ತ ಪುನರ್ ಸ್ಥಾಪನೆ…!!

ಉಡುಪಿ: ಉಡುಪಿ ನಗರಸಭೆಯಿಂದ ಅಧಿಕೃತವಾಗಿ ಸ್ಥಾಪನೆಗೊಂಡಿದ್ದ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಯಾವುದೇ ಮುನ್ಸೂಚನೆ ಇಲ್ಲದೆ ತೆರವು ಮಾಡಲಾಗಿದ್ದು, ಇದು ವಿವಾದವಾಗುತ್ತಿದ್ದಂತೆ ಮತ್ತೆ ಇಂದು ಪುನ‌ರ್ ಸ್ಥಾಪಿಸಲಾಗಿದೆ.

ಶನಿವಾರ ಬನ್ನಂಜೆಯಲ್ಲಿದ್ದ ನಾರಾಯಣಗುರು ವೃತ್ತವನ್ನು ಕಿತ್ತು ಹಾಕಿ, ಪಾಳು ಬಿದ್ದ ಜಾಗದ ಪೊದೆಗಳ ಮಧ್ಯೆ ಬಿಸಾಡಲಾಗಿತ್ತು. ಬಳಿಕ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್‌ ಬರೋಡ ನಾಮಫಲಕವನ್ನು ಹಾಕಲಾಗಿತ್ತು. ಇದು ಗೊತ್ತಾಗುತ್ತಿದ್ದಂತೆ ಪ್ರವೀಣ್ ಎಮ್ ಪೂಜಾರಿ, ಉಡುಪಿ ಶಾಸಕರ ಸಹಿತ ಮಾಜಿ ಶಾಸಕ, ಬಿಲ್ಲವ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದವು. ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಷಯ ತಿಳಿದ ಕೂಡಲೇ ಉಡುಪಿ ಜಿಲ್ಲಾ ಎಸ್ ಪಿ ಹರಿರಾಮ್ ಶಂಕರ್ ಅವರು ತಕ್ಷಣ ನಾರಾಯಣ ಗುರು ವೃತ್ತವನ್ನು ಪುನರ್‌ ಸ್ಥಾಪಿಸಲು ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ತಕ್ಷಣ ನಾರಾಯಣ ಗುರು ವೃತ್ತವನ್ನು ಪುನರ್‌ ಸ್ಥಾಪಿಸಿದ್ದಾರೆ.

ಪ್ರೈಮ್ ಟಿವಿಯಲ್ಲಿ ಈ ವರದಿ ಪ್ರಸಾರವಾಗಿತ್ತು. ಈ ವರದಿ ವೈರಲ್ ಆಗುತ್ತಿದ್ದಂತೆ ಕೂಡಲೇ ಪೊಲೀಸ್ ಇಲಾಖೆ ಸ್ಪಂದಿಸಿದೆ.