ಮಂಗಳೂರು: ಯುವತಿಯೋರ್ವಳು ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಾಪತ್ತೆಯಾದ ಯುವತಿಯನ್ನು ಬಜಲ್‌ನ ಕಟ್ಟಪುಣಿಯಲ್ಲಿ ವಾಸವಾಗಿದ್ದ ಕೊಪ್ಪಳ ಮೂಲದ ಶಿವಪುತ್ರಪ್ಪ ಅವರ ಪುತ್ರಿ ಯಲ್ಲಮ್ಮ (18) ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ, ಶಿವಪುತ್ರಪ್ಪ ಅವರು ಎಂದಿನಂತೆ ಬೆಳಿಗ್ಗೆ 7 ಗಂಟೆಗೆ ಉಳ್ಳಾಲದ ಆಜಾದ್ ನಗರದಲ್ಲಿ ದಿನಗೂಲಿ ಕೆಲಸಕ್ಕೆ ತೆರಳಿದ್ದು, ಅವರ ಪತ್ನಿಯೂ ಕೆಲಸಕ್ಕೆ ಹೋಗಿದ್ದರು. ಆ ಸಮಯದಲ್ಲಿ ಯಲ್ಲಮ್ಮ ಮನೆಯಲ್ಲಿ ಒಬ್ಬಂಟಿಯಾಗಿದ್ದಳು. ಆದರೆ, ಸಂಜೆ ಪೋಷಕರು ಹಿಂತಿರುಗಿದಾಗ, ಮನೆ ಹೊರಗಿನಿಂದ ಬೀಗ ಹಾಕಲಾಗಿತ್ತು ಮತ್ತು ಯಲ್ಲಮ್ಮ ನಾಪತ್ತೆಯಾಗಿದ್ದಳು. ಬೀಗದ ಕೈ ಹತ್ತಿರದಲ್ಲೇ ಬಿದ್ದಿತ್ತು. ಜೊತೆಗೆ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಎಲ್ಲಾ ಸ್ಥಳಗಳಲ್ಲಿ ಆಕೆಗಾಗಿ ಯುಡುಕಾಟ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಯಲ್ಲಮ್ಮ ಸುಮಾರು 4 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ದೃಢವಾದ ಮೈಕಟ್ಟು ಮತ್ತು ದುಂಡಗಿನ ಮುಖವನ್ನು ಹೊಂದಿದ್ದಾಳೆ. ಆಕೆ ಚೂಡಿದಾರ್ ಧರಿಸಿದ್ದಳು ಮತ್ತು ಕನ್ನಡ ಮಾತನಾಡುತ್ತಾಳೆ. ಆಕೆಯ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಕಂಕನಾಡಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.