Home Karavali Karnataka ಕಾಪು: ಅವಳಿ ಕರುವಿಗೆ ಜನ್ಮ ನೀಡಿದ ಗೋಮಾತೆ…!!

ಕಾಪು: ಅವಳಿ ಕರುವಿಗೆ ಜನ್ಮ ನೀಡಿದ ಗೋಮಾತೆ…!!

ಕಾಪು : ಕುಂಜಾರುಗಿರಿ ಪಾಜೈ ಎಂಬಲ್ಲಿನ ಕೃಷಿಕ ಹಾಗೂ ಅಡುಗೆ ವೃತ್ತಿಯ ಬಾಲಕೃಷ್ಣ ಭಟ್ ಮನೆಯ ದನ ಮಂಗಳವಾರ ಅವಳಿ ಕರುಗಳಿಗೆ ಜನ್ಮ ನೀಡಿದೆ.

ಗೋಮಾತೆ ಜನ್ಮ ನೀಡಿದ ಅವಳಿ ಕರುಗಳಲ್ಲಿ ಒಂದು ಹೆಣ್ಣು ಮತ್ತು ಇನ್ನೊಂದು ಗಂಡು ಕರುವಾಗಿದ್ದು ಎರಡು ಕರುಗಳು ಕೂಡ ಆರೋಗ್ಯವಾಗಿದೆ.

ಅವಳಿ ಕರು ಜನನದಿಂದ ಬಾಲಕೃಷ್ಣ ಭಟ್ ಸಂತಸ ವ್ಯಕ್ತಪಡಿಸಿದ್ದು, ಮಂಗಳವಾರ ಲಕ್ಷ್ಮೀ ಕೃಪೆಯಾದ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.