ಬೈಂದೂರು : ಶ್ರೀ ಗುಡೇ ಮಹಾಲಿಂಗೇಶ್ವರ ಸೌಹಾರ್ದ ಸಹಕಾರಿ ಸಂಘ (ನಿ.) ಹೇರಂಜಾಲು ಬೈಂದೂರು ತಾಲೂಕು, ಉಡುಪಿ ಜಿಲ್ಲೆ
2024-25ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಸನ್ಮಾನ ಸಭಾಭವನ, ಹೇರಂಜಾಲು ಅಧ್ಯಕ್ಷರಾದ ಶ್ರೀ ಹೆಚ್. ಜಯಶೀಲ ಎನ್. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷರಾದ ಶ್ರೀ ಹೆಚ್. ಜಯಶೀಲ ಎನ್. ಶೆಟ್ಟಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿ ಸಂಘ ಹುಟ್ಟು ಹಾಕುವುದರ ಮೂಲಕ ಸ್ಥಳೀಯ ಜನರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಆರ್ಥಿಕ ಶಕ್ತಿ ತುಂಬುವ ಕೆಲಸ ಸಂಘದ ವತಿಯಿಂದ ಮಾಡಿಕೊಂಡು ಬರಲಾಗುತ್ತಿದೆ. ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಅನಾರೋಗ್ಯಕ್ಕೆ ಒಳಗಾದ ಸಂಘದ ಸದಸ್ಯರಿಗೆ
ವೈದ್ಯಕೀಯ ನೆರವು ಹಾಗೂ ಅಕಾಲಿಕವಾಗಿ ಮೃತಪಟ್ಟ ವರಿಗೆ ಸಹಾಯಧನ ನೀಡಲಾಗಿದ್ದು.ಪ್ರಸ್ತುತ ವರ್ಷದಲ್ಲಿ
ಸಂಘದ ಸದಸ್ಯರಿಗೆ 8ಕೋಟಿ ಸಾಲವನ್ನು ವಿತರಿಸಿ ಸಂಘವು 52 ಕೋಟಿಗೂ ಅಧಿಕ ವ್ಯವಹಾರವನ್ನ ಈ ವರದಿ ವರ್ಷದಲ್ಲಿ ನಡೆಸಿದೆ ಎಂದರು.
ಸಂಘದ ಸಿಇಒ ತಿಮ್ಮಪ್ಪ ಪೂಜಾರಿ ವಾರ್ಷಿಕ ವರದಿ ಮಂಡಿಸಿ ಸದಸ್ಯರಿಂದ ಅನುಮೋದನೆಯನ್ನು ಪಡೆದು ಕೊಂಡು
ಮಾತನಾಡಿ,2022 ರಲ್ಲಿ ಆರಂಭ ಗೊಂಡಿರುವ ನಮ್ಮ ಸಂಸ್ಥೆಯು ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಾ ಬಂದಿದ್ದು,ಕಳೆದ ವರ್ಷ 8 ಲಕ್ಷ.ರೂ ಲಾಭ ಗಳಿಸಿದ ನಮ್ಮ ಸಂಸ್ಥೆ ಈ ವರ್ಷ 32ಲಕ್ಷ ಲಾಭ ಗಳಿಸಿದೆ.ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ 10% ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ವಿಶೇಷವಾಗಿ ಸಭೆಗೆ ಬಂದಂತಹ ಸಂಘದ ಸದಸ್ಯರಿಗೆ ಲಕ್ಕಿ ಕೂಪನ್ ನೀಡಲಾಯಿತು ಅದೃಷ್ಟವಂತ ಗ್ರಾಹಕರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ನಿವೃತ್ತ ಕಾರ್ಯನಿರ್ವಾಧಿಕಾರಿ ಮತ್ತು ಸಾಹಿತಿ ಪುಂಡಲಿಕ ನಾಯಕ್ ಮತ್ತು ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಸುಮಂಗಲ ಗಾಣಿಗ ಸಂಸ್ಥೆ ವತಿಯಿಂದ ಸನ್ಮಾನಿಸಿದರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಸುಧಾಕರ ಎಸ್ ಶೆಟ್ಟಿ,
ಅಣ್ಣಪ್ಪ ಶೆಟ್ಟಿ ಬಟ್ನಾಡಿ, ಹೆಚ್. ಸುರೇಶ್ ಶೆಟ್ಟಿ,ಸುಭಾಶ್ಚಂದ್ರ ಶೆಟ್ಟಿ ಹಳಗೇರಿ, ಮನೀಶ್ ಜೆ. ಶೆಟ್ಟಿ, ಸುಜಯ್ ಎಸ್. ಶೆಟ್ಟಿ,
ಶ್ರೀಮತಿ ಶೀಲಾ ಜಯಶೀಲ ಶೆಟ್ಟಿ,ಶ್ರೀಮತಿ ಕುಶಾಲ ಉದಯ ಶೆಟ್ಟಿ,
ಶ್ರೀಮತಿ ಮಂಜುಶ್ರೀ ರವೀಂದ್ರ ಶೆಟ್ಟಿ, ಸಂಘದ ಸರ್ವ ಸದಸ್ಯರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ಕಿರಣ್ ಶೆಟ್ಟಿ ಕುದ್ರುಕೋಡು ಸ್ವಾಗತಿಸಿದರು.ಅಧ್ಯಾಪಕರಾದ ಕರುಣಾಕರ್ ಶೆಟ್ಟಿ ನಿರೂಪಿಸಿದರು.
ಸಂಸ್ಥೆಯ ಸಿಬ್ಬಂದಿ ಶೈಲೇಶ್ ಶೆಟ್ಟಿ ವಂದಿಸಿದರು.
