Home Latest ಬ್ರಹ್ಮಾವರದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ರಕ್ಷಣೆ; ಜಿಲ್ಲಾಸ್ಪತ್ರೆಗೆ ದಾಖಲು

ಬ್ರಹ್ಮಾವರದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ರಕ್ಷಣೆ; ಜಿಲ್ಲಾಸ್ಪತ್ರೆಗೆ ದಾಖಲು

ಬ್ರಹ್ಮಾವರ,ಎ.5: ಎಸ್. ಎಂ. ಎಸ್ ಕಾಲೇಜು ಸನಿಹದ ಬಸ್ಸು ನಿಲ್ದಾಣದ ಬಳಿ, ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಮಂಗಳವಾರ ನಡೆದಿದೆ.

 

ಸುಡುಬಿಸಿಲಿನಲ್ಲಿ ಗಂಟುಮೂಟೆ ಹಿಡಿದು ಅಲೆದಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಸ್ಥಳೀಯ ಆಟೋ ಚಾಲಕಿ ಮನೀಷಾ ಎನ್ನುವರು, ಒಳಕಾಡುವರಿಗೆ ಮಾಹಿತಿ ನೀಡಿದ್ದರು. ದಾಖಲಿಸಲ್ಪಟ್ಟಿರುವ ವ್ಯಕ್ತಿ ಗೆ ಮನೋರೋಗ ವಿಭಾಗದಲ್ಲಿ ಚಿಕಿತ್ಸೆ ನಡೆಯುತ್ತಿದೆ. ರೋಗಿಯು ಹೆಸರು ದೀಪಕ್, ಬೆಳಗಾವಿಯ ನಿವಾಸಿ ಎಂದು‌ ಅಸ್ವಷ್ಟ ವಿಳಾಸ ಹೇಳಿಕೊಂಡಿದ್ದಾನೆ.ಚಾಲಕ ರಮೇಶ್ ಸಹಕರಿಸಿದರು, ವಾರಸುದಾರರು ಉಡುಪಿ ಜಿಲ್ಲಾಸ್ಪತ್ರೆಯನ್ನು ತುರ್ತಾಗಿ ಸಂಪರ್ಕಿಸಲು ಸೂಚಿಸಲಾಗಿದೆ.