ಕುಂದಾಪುರ: ಕಾಳಾವರ ಗ್ರಾಮದ ಶಾಲೆಯ ಬಳಿಯ ನಿವಾಸಿ ನಾಗರಾಜ (53) ಅವರು ಜ.28 ರ ರಾತ್ರಿ ಮಲಗಿದ್ದು, ಜ.29 ರ ಬೆಳಗ್ಗೆ ಪತ್ನಿ ನೋಡಿದಾಗ ಮಲಗಿದ್ದಲ್ಲಿಯೇ ಸಾವನ್ನಪ್ಪಿರುವುದಾಗಿದೆ.
ಇವರು ಕಳೆದ ಸುಮಾರು 20 ವರ್ಷಗಳಿಂದ ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದು, 4-5 ದಿನಗಳಿಂದ ಉಬ್ಬಸ ಹೆಚ್ಚಾಗಿದೆ. ಜ.28 ರಂದು ಚಾಲನಾ ಕೆಲಸಕ್ಕೆ ತೆರಳಿ, ಸಂಜೆ ಮನೆಗೆ ಬಂದಿದ್ದು, ಮಾತ್ರೆ ತೆಗೆದುಕೊಂಡು ಮಲಗಿದ್ದಾರೆ.
ಬೆಳಗ್ಗೆ ಪತ್ನಿ ಅವರು ನೋಡಿದಾಗ ಸಾವನ್ನಪ್ಪಿರುವುದಾಗಿದೆ. ಮನೆಯಲ್ಲಿ ಊಟ ಮಾಡಿ ಮಲಗಿದ್ದವರು ಉಬ್ಬಸ ಕಾಯಿಲೆಯಿಂದಲೋ ಅಥವಾ ಬೇರೆ ಯಾವುದೋ ಆರೋಗ್ಯ ಸಮಸ್ಯೆಯಿಂದಲೋ ಮೃತ ಪಟ್ಟಿರುವುದಾಗಿದೆ.
ತಾಯಿ ಗಿರಿಜಾ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



