Home Crime ಸಾರ್ವಜನಿಕ ಸ್ಥಳದಲ್ಲಿ ಜಗಳವಾಡುತ್ತಿದ್ದವರನ್ನು ವಶಕ್ಕೆ ಪಡೆದ ಪೊಲೀಸರು…!!

ಸಾರ್ವಜನಿಕ ಸ್ಥಳದಲ್ಲಿ ಜಗಳವಾಡುತ್ತಿದ್ದವರನ್ನು ವಶಕ್ಕೆ ಪಡೆದ ಪೊಲೀಸರು…!!

ಉಡುಪಿ: ಸಾರ್ವಜನಿಕರಿಗೆ ಸಮಸ್ಯೆಯಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜಗಳವಾಡುತ್ತಿದ್ದವರನ್ನು ಪೊಲೀಶರು ವಶಕ್ಕೆ ಪಡೆದ ಘಟನೆ ನಡೆದಿದೆ.

ತಡರಾತ್ರಿ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಗೋಪಾಲಕೃಷ್ಣ ಜೋಗಿಯವರು ರೌಂಡ್‌ನಲ್ಲಿದ್ದಾಗ ನಗರದ ಕರಾವಳಿ ಬೈಪಾಸ್ ರಾ.ಹೆ. 66ರ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಸುಮಾರು ನಾಲೈದು ಜನರು ತಮ್ಮೊಳಗೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಪರಸ್ಪರ ದೂಡಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಭಯ, ಪ್ರಕ್ಷುಬ್ದ ವಾತಾವರಣ ಉಂಟು ಮಾಡುತ್ತಿದ್ದರು.

ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಮಾಡಬಾರದು ಎಂದು ಪೊಲೀಸರು ತಿಳುವಳಿಕೆ ನೀಡಿದರೂ ಅದನ್ನು ಧಿಕ್ಕರಿಸಿ ಪೊಲೀಸರ ಎದುರಿನಲ್ಲೇ ಪರಸ್ಪರ ಬೈದಾಡುತ್ತಾ ದೂಡಾಡಿಕೊಂಡು ಕೈ-ಕೈ ಮಿಲಾಯಿಸಿಕೊಳ್ಳುತ್ತಿದ್ದರು. ಜಗಳವಾಡಿಕೊಳ್ಳುತ್ತಿದ್ದ ಬ್ರಹ್ಮಾವರ ತಾಲೂಕಿನ ಅಶ್ವತ್ ಪೂಜಾರಿ, ಅಶೋಕ ಹಾಗೂ ಪಪ್ಪು ಗುಲ್ಟರ್, ಪಾಂಚು ರಾಮ್, ರಾಹೂಲ್ ನಾಥ್ ನನ್ನು ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿಕೊಳ್ಳುತ್ತಿರುವುದ್ದಕ್ಕೆ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ