ಮಂಗಳೂರು : ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದ ಮೇರೆಗೆ ಪ್ರತ್ಯೇಕ ಪ್ರಕರಣದಲ್ಲಿ ಪಾಂಡೇಶ್ವರ ಮತ್ತು ಕದ್ರಿ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ನಗರದ ಅತ್ತಾವರ ಫಕ್ಕೀರ್ ರಸ್ತೆಯಲ್ಲಿರುವ ಖಾಸಗಿ ಕಟ್ಟಡವೊಂದರ ರಿಕ್ರಿಯೇಶನ್ ಕ್ಲಬ್‌ವೊಂದಕ್ಕೆ ಶನಿವಾರ ರಾತ್ರಿ 9ಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ದಾಳಿ ಮಾಡಿ ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇರೆಗೆ ಮಂಜೇಶ್ವರ ತಾಲೂಕಿನ ಕುಂಜತ್ತೂರಿನ ಬಿ.ವಿ. ರಾಜು (31) ಮತ್ತು ಸುರತ್ಕಲ್ ಕೃಷ್ಣಾಪುರದ ಶೆಜಿನ್ (18) ಎಂಬವರನ್ನು ಬಂಧಿಸಿದ್ದಾರೆ.
ನಗರದ ಕದ್ರಿ ಪಾರ್ಕ್ ಬಳಿ ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇರೆಗೆ ಉಡುಪಿ ಜಿಲ್ಲೆಯ ಕುಂಜಿಬೆಟ್ಟು ನಿವಾಸಿ ರಾಶೀದ್ ಖಾನ್ ಎಂಬಾತನನ್ನು ಕದ್ರಿ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಮಣಿಕಂಠ ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.





