ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಮನೆಯೊಂದರಲ್ಲಿ ಎರಡು ಚಿನ್ನದ ಉಂಗುರ ಕಳ್ಳತನವಾದ ಘಟನೆ ನಡೆದಿದೆ.
ಬೊಮ್ಮರಬೆಟ್ಟು ನಿವಾಸಿ ಪದ್ಮಾವತಿ ಎಂಬವರ ಮನೆಯಲ್ಲಿ ಕಳ್ಳತನ ಸಂಭವಿಸಿದೆ.
ಆಕಾಶ್ ಹಾಗೂ ಅಶ್ವಥ್ ಎಂಬವರ ಮೇಲೆ ಸಂಶಯವಿದೆ ಎಂದು ಪದ್ಮಾವತಿಯವರು ಹಿರಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ವಿವರ : ಪಿರ್ಯಾದಿ ಪದ್ಮಾವತಿ (41) ಬೊಮ್ಮರಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ: 23/08/2025 ರಂದು ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದಿದ್ದು ಅ ಸಮಯ ಸೆಲ್ಪ್‌ನಲ್ಲಿ ಬಟ್ಟೆಯ ಒಳಗೆ ಇಟ್ಟಿದ್ದ ಬಂಗಾರದ ಒಡವೆಗಳನ್ನು ಪರಿಶೀಲಿಸಲಾಗಿ ಅದರಲ್ಲಿದ್ದ ಚಿನ್ನದ ಸರ ಸುಮಾರು 20 ಗ್ರಾಂ ಅಂದಾಜು ಮೌಲ್ಯ 1,20,000/- ಹಾಗೂ 2 ಉಂಗುರ ಸುಮಾರು 4 ಗ್ರಾಂ ಅಂದಾಜು ಮೌಲ್ಯ 24000/- ರೂ ಆಗಬಹುದು ಸದ್ರಿ ಒಡವೆಗಳು ಕಾಣುತ್ತಿರಲಿಲ್ಲ ಪಿರ್ಯಾದುದಾರರು ಎಲ್ಲಾ ಕಡೆ ಎಲ್ಲಾ ಕಡೆ ಹುಡುಕಾಡಿದ್ದು ನಂತರ ಅಕ್ಕಪಕ್ಕದಲ್ಲಿ ವಿಚಾರಿಸಲಾಗಿ ಒಂದು ವಾರದ ಹಿಂದೆ ಆಕಾಶ್ ಎಂಬವರು ಅಶ್ವಥ್ ಎಂಬವರೊಂದಿಗೆ ಮನೆಯ ಬಳಿ ಬಂದು ಹೋಗಿರುವ ಬಗ್ಗೆ ತಿಳಿಸಿದ್ದು ಪಿರ್ಯಾದುದಾರರಿಗೆ ಆಕಾಶ್ ಮತ್ತು ಅಶ್ವಥ್ ಎಂಬವರ ಮೇಲೆ ಸಂಶಯವಿದ್ದು ದಿನಾಂಕ: 17/08/2025ರ ರಾತ್ರಿ 7:30 ಗಂಟೆಯಿಂದ ದಿನಾಂಕ: 23/08/2025 ರ ಸಂಜೆ 5:00 ಗಂಟೆ ಮಧ್ಯಾವಧಿಯಲ್ಲಿ ಪಿರ್ಯಾದುದಾರರು ಮನೆಯಲ್ಲಿ ಇಲ್ಲದ ಸಮಯ ತೆಗದುಕೊಂಡು ಹೋಗಿರುವ ಬಗ್ಗೆ ಸಂಶಯ ಇರುವುದಾಗಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2025 ಕಲಂ: 305(a) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
