ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಕೋಟೇಶ್ವರ ಎಂಬಲ್ಲಿ ಮಹಿಳೆಯೊಬ್ಬರು ಮನೆಯಲ್ಲಿ ಮಕ್ಕಳನ್ನು ಬಿಟ್ಟು ನಾಪತ್ತೆಯಾದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಮಹದೇವ ಎಂಬವರ ಪತ್ನಿ ಅಂಜಲಿ ನಾಪತ್ತೆಯಾದ ಮಹಳೆ ಎಂದು ತಿಳಿದು ಬಂದಿದೆ.
ಗಂಡ ಕೆಲಸಕ್ಕೆ ಹೋದಾಗ ಪತ್ನಿ ಎರಡು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕಾಣೆಯಾಗಿದ್ದಾರೆ ಎನ್ನಲಾಗಿದೆ.
ಪ್ರಕರಣ ಸಾರಾಂಶ : ಪಿರ್ಯಾದಿ ಮಹದೇವ (32) ಬಾರಾಬನರೆ, ಉತ್ತರಪ್ರದೇಶ ಇವರು ಸುಮಾರು 25 ದಿನಗಳ ಹಿಂದೆ ಉತ್ತರ ಪ್ರದೇಶದಿಂದ ಕೆಲಸ ಹುಡುಕಿಕೊಂಡು ಉಡುಪಿಗೆ ಬಂದು ಅಲ್ಲಿಂದ ಕೋಟೇಶ್ವರಕ್ಕೆ ಬಂದು ಕೋಟೇಶ್ವರ ಗ್ರಾಮದಲ್ಲಿರುವ ಸನ್ ರೈಸ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು ಹೆಂಡತಿ ಅಂಜಲಿ ಪ್ರಾಯ 28 ವರ್ಷ ಮತ್ತು ಮಗಳು ಶಶಿ(8) ಮಗ ಆದರ್ಶ ಕುಮಾರ್ (4) ರವರ ಜೊತೆ ಕೋಟೇಶ್ವರದಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡಿಕೊಂಡಿರುತ್ತಾರೆ. ದಿನಾಂಕ 07/07/2025 ರಂದು ಬೆಳಿಗ್ಗೆ 06:30 ಗಂಟೆಗೆ ಪಿರ್ಯಾದಿದಾರರು ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದು ಹೆಂಡತಿ ಮಕ್ಕಳು ಮನೆಯಲ್ಲಿ ಇದ್ದರು ಬೆಳಿಗ್ಗೆ 10:00 ಗಂಟೆಗೆ ಫ್ಯಾಕ್ಟರಿಯಿಂದ ವಾಪಾಸ್ಸು ಮನೆಗೆ ಬಂದಾಗ ಹೆಂಡತಿ ಅಂಜಲಿ ಇಲ್ಲದೇ ಇದ್ದು ಮಕ್ಕಳು ಮಾತ್ರ ಮನೆಯಲ್ಲಿ ಇದ್ದರು ಎಲ್ಲಾ ಕಡೆ ಹುಡುಕಾಡಿ ನಂತರ ಪಿರ್ಯಾದಿದಾರರ ಊರು ಮನೆ ಹಾಗೂ ತನ್ನ ಹೆಂಡತಿಯ ಮನೆಗೂ ಕೂಡ ಕರೆ ಮಾಡಿ ವಿಚಾರಿಸಿದಲ್ಲಿ ಪತ್ತೆಯಾಗಿರುವುದಿಲ್ಲ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 87/2025 ಕಲಂ: ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.