ಅಮಾಸೆಬೈಲು: ಉಡುಪಿ ಅಮಾಸೆಬೈಲು ಸಮೀಪ ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದವರು ಸತೀಶ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಘಟನೆ ವಿವರ : ಪಿರ್ಯಾದಿ ಶೇಖರ ಶೆಟ್ಟಿ(63) ರಟ್ಟಾಡಿ ಗ್ರಾಮ ಕುಂದಾಪುರ ತಾಲೂಕು ಇವರ ಅಕ್ಕ ಶ್ರೀಮತಿ ಕೃಷ್ಣಿ ಶೆಡ್ತಿಯವರ ಮಗ ಸತೀಶ್ ಶೆಟ್ಟಿ ಪ್ರಾಯ: 35 ವರ್ಷ ರವರು ಕೂಲಿ ಕೆಲಸ ಮಾಡಿಕೊಂಡಿದ್ದು,ದಿನಾಂಕ: 26-08-2025 ರಂದು 14:00 ಗಂಟೆಯಿಂದ 14:30 ಗಂಟೆಯ ಮದ್ಯಾವಧಿಯಲ್ಲಿ ಕುಂದಾಪುರ ತಾಲೂಕು ರಟ್ಟಾಡಿ ಗ್ರಾಮದ ಮಕ್ಕಿಮನೆಯ ತಮ್ಮ ವಾಸದ ಮನೆಯ ಕೋಣೆಯಲ್ಲಿನ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುತ್ತಾರೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.