ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಮನೆಯ ಕಂಪೌಡ್ ಒಳಗೆ ಇಟ್ಟಿದ್ದ ಬೈಕ್ ಅನ್ನು ಕಳ್ಳರು ಕಳವು ಮಾಡಿದ ಘಟನೆ ನಡೆದಿದೆ.
ಕೆ. ಅಬ್ದುಲ್ ಖಾದರ್ ಎಂಬವರ ಬೈಕ್ ಕಳವು ಆಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ಕೆ. ಅಬ್ದುಲ್ ಖಾದರ್ (61),ಯಡ್ತರೆ ಗ್ರಾಮ ಬೈಂದೂರು ಇವರು KA-15-ED-0827 ಟಿವಿಎಸ್ ರೆಡಾನ್ ಕಂಪನಿಯ ಮೋಟಾರ ಸೈಕಲ್ ಅದರ ಕೀ ಸಮೇತ ದಿನಾಂಕ 07/09/2025 ರಂದು ಮನೆಯ ಕಂಪೌಂಡ್ ಒಳಗೆ ಇಟ್ಟಿರುವುದನ್ನು ಯಾರೋ ಕಿಡಿಗೇಡಿಗಳು ಮೋಟಾರ ಸೈಕಲ್‌ನ್ನು ತೆಗೆದುಕೊಂಡು ಹೋಗಿದ್ದು ಹುಡುಕಾಡಿದಾಗ ದಿನಾಂಕ 08/09/2025 ರಂದು ಬೈಂದೂರು ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಸಿಕ್ಕಿರುತ್ತದೆ. ನಂತರ ದಿನಾಂಕ 21/09/2025 ರಂದು ರಾತ್ರಿ 11:45 ಗಂಟೆಗೆ ಪಿರ್ಯಾದಿದಾರರ ಮನೆಯ ಕಾಂಪೌಂಡ್‌ನಲ್ಲಿ ಮೋಟರ್ ಸೈಕಲ್ ನ್ನು ಇಟಿದ್ದು ದಿನಾಂಕ 22/09/2025 ರಂದು ಬೆಳಿಗ್ಗೆ 6:00 ಗಂಟೆಗೆ ನೋಡುವಾಗ ಮೋಟರ ಸೈಕಲ್ ಇಟ್ಟ ಸ್ಥಳದಲ್ಲಿ ಇರುವುದಿಲ್ಲ ಯಾರೋ ಕಳ್ಳರು ಮೋಟಾರ ಸೈಕಲ್‌ನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 172/2025 ಕಲಂ: 303(1) BNS ರಂತೆ ಪ್ರಕರಣ ದಾಖಲಾಗಿರುತ್ತದೆ.