ಉಡುಪಿ : ಪಾಜಕದ ಆನಂದತೀರ್ಥ ವಿದ್ಯಾಲಯದಲ್ಲಿ ಪ್ರತಿಷ್ಠಿತ ರಾಜ್ಯಮಟ್ಟದ ಕಬ್ ಮತ್ತು ಬುಲ್‌ಬುಲ್ ಉತ್ಸವವನ್ನು ಆತಿಥ್ಯ ವಹಿಸಲು ತಯಾರಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇಂದು ಶಾಲಾ ಆವರಣದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಹಲವು ಗಣ್ಯರು ಪಾಲ್ಗೊಂಡು ಸಭೆ ನಡೆಸಿದರು.
ಡಾ. ಪಿ. ಜಿ. ಆರ್. ಸಿಂಧಿಯಾ, ರಾಜ್ಯ ಮುಖ್ಯ ಆಯುಕ್ತರು, ಜಯಕರ ಶೆಟ್ಟಿ ಇಂದ್ರಾಳಿ , ಉಡುಪಿ ಜಿಲ್ಲಾ ಮುಖ್ಯ ಆಯುಕ್ತರು, ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು, ಹಾಗೂ ಶ್ರೀ ಪ್ರಭಾಕರ ಭಟ್, ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಜ್ಯ ಸಂಘಟನಾ ಸಹ ಕಾರ್ಯದರ್ಶಿ ಸುಮನ್ ಶೇಖರ್ರ್ ಭಾಗವಹಿಸಿ ಉತ್ಸವದ ರೂಪುರೇಷೆಗಳನ್ನು ಸಿದ್ಧಪಡಿಸಿಲಾಯಿತು.
ಈ ಮಹಾ ಶಿಬಿರದಲ್ಲಿ 1,200 ಕ್ಕೂ ಹೆಚ್ಚು ಕಬ್ ಮತ್ತು ಬುಲ್‌ಬುಲ್‌ಗಳು, 250 ಶಿಕ್ಷಕರು ಮತ್ತು 150 ರೋವರ್ ಹಾಗೂ ರೇಂಜರ್ ಸ್ವಯಂಸೇವಕರು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಶ್ರೀ ಮಧ್ವರಾಜ್ ಭಟ್, ಆನಂದತೀರ್ಥ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ, ಡಾ. ಗೀತಾ ಶಶಿಧರ್, ಆನಂದತೀರ್ಥ ವಿದ್ಯಾಲಯದ ಪ್ರಾಚಾರ್ಯರು, ಜೊತೆಗೆ ಫ್ಲಾಕ್ ಲೀಡರ್‌ಗಳು, ಕಬ್ ಮಾಸ್ಟರ್‌ಗಳು ಹಾಗೂ ಸ್ಕೌಟ್ ಮತ್ತು ಗೈಡ್ ನಾಯಕರು ಉಪಸ್ಥಿತರಿದ್ದರು. ಕಾಲೇಜು ಉಪನ್ಯಾಸಕರಾದ ಶ್ರೀ ಸೌರಭ್ ಸಿ. ಸಹ ಹಾಜರಿದ್ದರು.
