ಉಡುಪಿ : IAS ಅಧಿಕಾರಿ’ಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ಜಾರಿ ಮತ್ತು ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಮಾಡಲು ಸರ್ಕಾರದ ಅವರ ಮುಖ್ಯ ಕಾರ್ಯದರ್ಶಿಗಳು / ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿತ್ತು.
ಮುಂದುವರೆದು, ಈ ಕೆಳಕಂಡ ಅಧಿಕಾರಿಗಳನ್ನು ನಮೂದಿಸಿರುವ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ಆದೇಶಿಸಿದೆ ಎಂದಿದ್ದಾರೆ.
ಹೀಗಿದೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕಾತಿ ಪಟ್ಟಿ
ಹರ್ಷ ಗುಪ್ತ – ಬೆಂಗಳೂರು ನಗರ
ಡಾ.ಪಿಸಿ ಜಾಫರ್ – ಬೆಂಗಳೂರು ಗ್ರಾಮಾಂತರ
ವಿ.ರಶ್ಮಿ ಮಹೇಶ್ – ರಾಮನಗರ
ಅಮಲಾನ್ ಆದಿತ್ಯ ಬಿಸ್ವಾಸ್ – ಚಿತ್ರದುರ್ಗ
ಡಾ.ಏಕ್ ರೂಪ್ ಕೌರ್ – ಕೋಲಾರ
ವಿಪುಲ್ ಬನ್ಸಾಲ್ – ಬೆಳಗಾವಿ
ಡಾ.ಎನ್ ಮಂಜುಳ – ಚಿಕ್ಕಬಳ್ಳಾಪುರ
ಬಿಬಿ ಕಾವೇರಿ – ಶಿವಮೊಗ್ಗ
ಡಾ.ಶಮ್ಲಾ ಇಕ್ಬಾಲ್ – ದಾವಣಗೆರೆ
ಡಾ.ಎಸ್ ಸೆಲ್ವಕುಮಾರ್ – ಮೈಸೂರು
ವಿ ಅನ್ಬುಕುಮಾರ್ – ಮಂಡ್ಯ
ಡಾ.ಎಂ ವಿ ವೆಂಕಟೇಶ – ಚಾಮರಾಜನಗರ
ನವೀನ್ ರಾಜ್ ಸಿಂಗ್ – ಹಾಸನ
ಡಾ.ಎನ್ ವಿ ಪ್ರಸಾದ್ – ಕೊಡಗು
ರಾಜೇಂದ್ರ ಕುಮಾರ್ ಕಠಾರಿಯಾ – ಚಿಕ್ಕಮಗಳೂರು
ರೋಹಿಣಿ ಸಿಂಧೂರಿ ದಾಸರಿ – ಉಡುಪಿ
ತುಳಸಿ ಮದ್ದಿನೇನಿ – ದಕ್ಷಿಣ ಕನ್ನಡ
ದೀಪ ಚೋಳನ್ – ತುಮಕೂರು
ಡಾ.ವಿ ರಾಮ್ ಪ್ರಸಾತ್ ಮನೋಹರ್ – ಧಾರವಾಡ
ರಮಣ ದೀಪ್ ಚೌಧರಿ – ಗದಗ
ಉಜ್ವಲ್ ಕುಮಾರ್ ಘೋಷ್ – ವಿಜಯಪುರ
ಸುಮಷಾ ಗೋಡಬೋಲೆ- ಉತ್ತರ ಕನ್ನಡ
ಮೊಹಮ್ಮದ್ ಮೊಹಸಿನ್ – ಬಾಗಲಕೋಟೆ
ಪಂಕಜ್ ಕುಮಾರ್ ಪಾಂಡೆ – ಕಲಬುರ್ಗಿ
ಮನೋಜ್ ಜೈನ್ – ಯಾದಗಿರಿ
ರಿತೇಶ್ ಕುಮಾರ್ ಸಿಂಗ್ – ರಾಯಚೂರು
ಕೆ.ಪಿ ಮೋಹನ್ ರಾಜ್ – ಕೊಪ್ಪಳ
ಡಾ.ಕೆವಿ ತ್ರಿಲೋಕ್ ಚಂದ್ರ – ಬಳ್ಳಾರಿ
ಡಿ.ರಂದೀಪ್ – ಬೀದರ್
ಡಾ.ಆರ್ ವಿಶಾಲ್ – ಹಾವೇರಿ
ಸಮೀರ್ ಶುಕ್ಲಾ- ವಿಜಯನಗರ