ಉಡುಪಿ : ಯೂತ್ ಸ್ಪೋರ್ಟ್ಸ್ & ಕಲ್ಬರಲ್ ಕ್ಲಬ್ ಅಂಬಲಪಾಡಿ, ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಂಬಲಪಾಡಿ, ಉಡುಪಿ ಇದರ 48ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಇದೇ ಬರುವ ಆಗಸ್ಟ್ 27 ರಂದ 31ರವರೆಗೆ ವಿಜೃಂಭಣೆಯಿಂದ ಜರುಗಲಿದೆ. ಆಗಸ್ಟ್ 27ರ ಬುಧವಾರ 10:30ಕ್ಕೆ ಅಂಬಲಪಾಡಿ, ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ಶ್ರೀ ಗಣೇಶ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ.
ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ, ಅಂಬಲಪಾಡಿಯ ಸಂಪೂರ್ಣ ಸಹಕಾರದೊಂದಿಗೆ ಆಗಸ್ಟ್ 27 ರ ಬೆಳಿಗ್ಗೆ ನಡೆಯುವ ಶ್ರೀ ಗಣೇಶ ಪ್ರತಿಷ್ಠಾ ಮಹೋತ್ಸವ ಮತ್ತು ಗಣಹೋಮ ಹಾಗೂ ಐದು ದಿನಗಳ ತನಕ ನಡೆಯುವ ಮಧ್ಯಾಹ್ನದ ಮಹಾಪೂಜೆ, ರಾತ್ರಿಯ ರಂಗಪೂಜೆಗೆ ಭಕ್ತಾಭಿಮಾನಿಗಳೆಲ್ಲರೂ ಆಗಮಿಸಿ, ತನು-ಮನ-ಧನ ಸಹಕಾರವಿತ್ತು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ, ಶ್ರೀ ವಿಫ್ನೇಶ್ವರನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಐದು ದಿನಗಳ ತನಕ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಾವು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವೀಗೊಳಿಸಲು
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಅಂಬಲಪಾಡಿ ಗೌರನವಾಧ್ಯಕ್ಷರು, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿ.ಸೂ: ಅನ್ನಸಂತರ್ಪಣೆಗೆ ಹೊರಕಾಣಿಕೆಯನ್ನು ಸ್ವೀಕರಿಸಲಾಗುವುದು.







