ಉಡುಪಿ : ಮರೆವು ಕಾಯಿಲೆಯಿಂದ ಬಳಲುತ್ತಿರುವ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಕುಂಬಾರಕೊಪ್ಪ ಗುಬ್ಬಾಗದ್ದೆ ನಿವಾಸಿ ವೆಂಕಟೇಶ್ ರಾವ್ (78) ಎಂಬ ವೃದ್ಧರು ಕಾರ್ಯಕ್ರಮದ ನಿಮಿತ್ತ ಮಗಳ ಮನೆಯಾದ ಕುಂದಾಪುರದ ಹಳ್ಳಿಹೊಳೆಗೆ ಬಂದಿದ್ದು, ಎ.23ರಂದು ಅಪರಾಹ್ನ 2:30ರ ಸುಮಾರಿಗೆ ಸಮಾರಂಭದ ಊಟ ಮುಗಿಸಿ, ಮನೆಯ ಬಳಿ ಸುತ್ತಾಡಿಕೊಂಡು ಬರುವುದಾಗಿ ಹೇಳಿ ಹೋದವರು ಇದುವರೆಗೂ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ 5 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ ಸಾಧಾರಣ ಶರೀರ ಹೊಂದಿದ್ದು ಕನ್ನಡ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣೆಯ ಪಿ.ಎಸ್ 08259-280299, 08254-230338, 08254-232338,
ದೂ.ಸಂಖ್ಯೆ: 0820-2534777 ಹಾಗೂ ರೇಂಜ್ ಮೊ.ನಂ:8242220501 ಅನ್ನು ಸಂಪರ್ಕಿಸಬಹುದು ಎಂದು ಶಂಕರನಾರಾಯಣ ಪೊಲೀಸ್ ಠಾಣೆಯ ಉಪ ನಿರೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.





