ಕುಂದಾಪುರ: ಬೀಜಾಡಿ ಗ್ರಾಮ ಅರಸರಬೆಟ್ಟು ಕ್ರಾಸ್‌ನಲ್ಲಿ ಕಾರು ಡಿಕ್ಕಿ ಮಹಿಳೆ ಮೃತಪಟ್ಟ ಘಟನೆ ಬೆಳಗ್ಗೆ ನಡೆದಿದೆ.
ಕುಂಭಾಸಿಯಿಂದ ಕೋಟೇಶ್ವರ ರಥ ಬೀದಿ ಕಡೆಗೆ ಸಾಗುತ್ತಿದ್ದ ಮಾರುತಿ ಓಮ್ನಿ ಕಾರು ನಡೆದುಕೊಂಡು ಹೋಗುತ್ತಿದ್ದ ಗೋಪಾಡಿ ನಿವಾಸಿ ಚಂದ್ರಮತಿ (78) ಎಂಬವರಿಗೆ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡಿದ್ದ ಅವರನ್ನು ಕೋಟೇ ಶ್ವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯ ಲಾಗಿದ್ದು ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟ ಬಗ್ಗೆ ಘೋಷಿಸಿದ್ದಾರೆ.
ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




