Home Karkala News ಮುಂಡ್ಕೂರು : ಹಗಲು ಬ್ರಹ್ಮ ರಥೋತ್ಸವ ಸಂಪನ್ನ…!!

ಮುಂಡ್ಕೂರು : ಹಗಲು ಬ್ರಹ್ಮ ರಥೋತ್ಸವ ಸಂಪನ್ನ…!!

ಬೆಳ್ಮಣ್: ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದಿವ್ಯ ಸನ್ನಿಯಲ್ಲಿ ವರ್ಷಾವಧಿ ನಡೆಯುವ ಹಗಲು ಬ್ರಹ್ಮ ರಥೋತ್ಸವ ಕ್ಷೇತ್ರದ ಪ್ರದಾನ ಅರ್ಚಕ ರಾಮದಾಸ ಆಚಾರ್ಯರ ನೇತೃತ್ವದಲ್ಲಿ ಎಡಪದವು ನಾರಾಯಣ ತಂತ್ರಿಗಳ ಪೌರೋಹಿತ್ಯದಲ್ಲಿ ಇಂದು (ಬುಧವಾರ) ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ಕಲಶಾಭಿಷೇಕ, ಪೂರ್ವಾಹ್ನ 11 ಗಂಟೆಗೆ ಮಹಾಪೂಜೆ, ದೇವರ ಉತ್ಸವ, ಬಲಿಮೂರ್ತಿ ಬಲಿ ದರ್ಶನ, ದುರ್ಗಾಪರಮೇಶ್ವರಿ ಅಮ್ಮನವರ ರಥರೋಹಣ, ಹಗಲು ರಥೋತ್ಸವದ ಬಳಿಕ ಪಲ್ಲ ಪೂಜೆ ನಡೆದು ಮಹಾ ಅನ್ನಸಂತರ್ಪಣೆ ನೆರವೇರಿತು.

ಈ ಸಂದರ್ಭದಲ್ಲಿ ದೇವಳದ ಪವಿತ್ರಪಾಣಿ ರಾಮ ಮಡ್ಮಣ್ಣಾಯ, ದೇಗುಳದ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಿ. ರಾವ್, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುರೇಂದ್ರ ಎಸ್ ಶೆಟ್ಟಿ ಕೋರಿಬೆಟ್ಟು ಗುತ್ತು, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸುಜಾತ ಸುಭೋದ್ ಶೆಟ್ಟಿ ಸಚ್ಚರಪರಾರಿ, ಅಕ್ಷತಾ ವಿಶ್ವಿತ್ ಶೆಟ್ಟಿ ಸಂಕಲಕರಿಯ, ಜಗದೀಶ್ ಶೆಟ್ಟಿ ನಡಿಗುತ್ತು ಸಚ್ಚರಿಪೇಟೆ, ಶೇಖರ್ ಶೆಟ್ಟಿ ಮಾಣೆಬೆಟ್ಟು, ಕೃಷ್ಣ ಪೂಜಾರಿ ಬಂಟ್ರೋಟ್ಟು, ಸುರೇಶ್ ಸಾಲಿಯಾನ್ ಅಲಂಗಾರ್, ನಳಿನಾಕ್ಷಿ ರಾಜು ಸೇರಿಗಾರ ಕಡಪುಕರಿಯ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಮುಲ್ಲಡ್ಕಪರಾರಿ, ಪ್ರಸಾದ್ ಶೆಟ್ಟಿ ಅಂಗಡಿಗುತ್ತು, ಸುಧಾಕರ್ ಶೆಟ್ಟಿ ಗರಡಿ, ಹರಿ ಭಟ್, ಅರುಣ್ ಭಟ್, ಊರ ಪರವೂರ ಭಕ್ತಾದಿಗಳು ಹಾಗೂ ಮುಂಡ್ಕೂರು ಮುಲ್ಲಡ್ಕ , ಇನ್ನಾ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸಿದರು.