Home Crime ಕಾಪು : ವ್ಯಕ್ತಿಯೋರ್ವರಿಗೆ ಕ್ರೇಟಾ ಕಾರೊಂದು‌ ಢಿಕ್ಕಿ ಹೊಡೆದು ಮೃತ್ಯು…!!

ಕಾಪು : ವ್ಯಕ್ತಿಯೋರ್ವರಿಗೆ ಕ್ರೇಟಾ ಕಾರೊಂದು‌ ಢಿಕ್ಕಿ ಹೊಡೆದು ಮೃತ್ಯು…!!

ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಕ್ರೇಟಾ ಕಾರೊಂದು‌ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ.

ಸಾವನ್ನಪ್ಪಿದ ಪಾದಚಾರಿ ಪೀರ್ ಮೊಹಮ್ಮದ್‌ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ : ಪಿರ್ಯಾದಿದಾರರಾದ ಮಹಮ್ಮದ್‌ ಇರ್ಷಾದ್‌ (46), ಮಲ್ಲಾರು ಗ್ರಾಮ, ಕಾಪು ಇವರು ದಿನಾಂಕ 24/08/2025 ರಂದು ಸಂಜೆ ಮನೆಯಿಂದ ನಡೆದುಕೊಂಡು ಕೊಪ್ಪಲಂಗಡಿಯಲ್ಲಿರುವ ನೂರುಲ್‌ ಹುದಾ ಮದ್ರಾಸಾ ಕ್ಕೆ ನಮಾಜ್‌ ಮಾಡಲೆಂದು ಹೋಗುತ್ತಿರುವಾಗ ಮದ್ಯಾಹ್ನ 03:50 ಗಂಟೆಗೆ ಪಿರ್ಯಾದಿದಾರರ ಪರಿಚಯದವರಾದ ಪೀರ್‌ ಮೊಹಮ್ಮದ್‌ ರವರು ಅವರ ಮನೆಯು ರಸ್ತೆಯ ಆಚೆ ಕಡೆಯಿದ್ದಿದ್ದು ಅವರು ಮಸೀದಿಗೆ ಬರುವ ಉದ್ದೇಶಕ್ಕೆ ಮೌಂಟ್ರಾ ಎಲೆಕ್ಟ್ರಿಕ್‌ ಆಟೋ ಶೋ ರೂಂ ನ ಹತ್ತಿರ ಮಂಗಳೂರು–ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯನ್ನು ನಡೆದುಕೊಂಡು ದಾಟುತ್ತಿದ್ದಿದ್ದು ಅದಕ್ಕೆ ಪಿರ್ಯಾದಿದಾರರು ಪೀರ್‌ ಮೊಹಮ್ಮದ್‌ ರವರೊಂದಿಗೆ ಒಟ್ಟಿಗೆ ಮಸೀದಿಗೆ ಹೋಗುವ ಎಂದು ಅವರು ರಸ್ತೆಯ ಇಚೆ ಕಡೆಗೆ ಬರುವುದನ್ನು ನೋಡುತ್ತಿರುವಾಗ ಪೀರ್‌ ಮೊಹಮ್ಮದ್‌ ರವರು ರಸ್ತೆಯ ಮದ್ಯದಲ್ಲಿರುವ ಡಿವೈಡರ್‌ ಬಳಿ ತಲುಪುವಾಗ ಮಂಗಳೂರು ಕಡೆಯಿಂದ ಬರುತ್ತಿದ್ದ KA-19-MM-4595 ನೇ ನಂಬ್ರದ ಕಪ್ಪು ಬಣ್ಣದ ಕ್ರೇಟಾ ಕಾರನ್ನು ಅದರ ಚಾಲಕ ಮಹಮ್ಮದ್‌ ಜಾಸಿಂ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಪೀರ್‌ ಮೊಹಮ್ಮದ್‌ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಪೀರ್‌ ಮೊಹಮ್ಮದ್‌ ರವರು ಕಾರಿನ ಮುಂಬದಿ ಬಾನೆಟ್‌ ಮತ್ತು ಗ್ಲಾಸ್‌ನ ಮೇಲೆ ಬಿದ್ದು ನಂತರ ರಸ್ತೆಗೆ ಬಿದ್ದಿದ್ದು ಪಿರ್ಯಾದುದಾರರು ಓಡಿ ಹೋಗಿ ನೋಡಿದಾಗ ಪೀರ್‌ ಮೊಹಮ್ಮದ್‌ರವರ ತಲೆಯಲ್ಲಿ ಮತ್ತು ಮೈ ಕೈಗಳಿಗೆ ಪೆಟ್ಟಾಗಿ ರಕ್ತ ಗಾಯವಾಗಿ ತೀವೃ ಅಸ್ವಸ್ಥರಾಗಿದ್ದರು ಅವರನ್ನು ಪಿರ್ಯಾದುದಾರರು ಮತ್ತು ಸ್ಥಳೀಯರೆಲ್ಲಾ ಸೇರಿಕೊಂಡು ಉಪಚರಿಸಿ ಒಂದು ಅಂಬುಲೆನ್ಸ್‌ ವಾಹನದಲ್ಲಿ ಹಾಕಿ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು. ಪೀರ್‌ ಮೊಹಮ್ಮದ್‌ ರವರನ್ನು ಆಸ್ಪತ್ರೆ ಕರೆದುಕೊಂಡು ಹೋಗುವಾಗ ದಾರಿ ಮದ್ಯದಲ್ಲಿ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 106/2025 ಕಲಂ: 281, 106(1) BNS ರಂತೆ ಪ್ರಕರಣ ದಾಖಲಾಗಿರುತ್ತದೆ.