ಉಡುಪಿ : ಅಂಬಲಪಾಡಿ ಯಲ್ಲಿ ಸೋಮವಾರ ನಡೆದ ಅಪಘಾತಕ್ಕೆ ಬೈಕ್ ಸವಾರ ದೆಂದೂರುಕಟ್ಟೆ ನಿವಾಸಿ ಪ್ರದೀಪ್ ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತದ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಅಂಬಲಪಾಡಿ ಜಂಕ್ಷನ್ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು, ಸರ್ವೀಸ್ ರಸ್ತೆಯಲ್ಲಿದ್ದ ಹೊಂಡಕ್ಕೆ ಬೈಕ್ ಸವಾರ ಬಲಿಯಾಗಿದ್ದಾನೆ.
ಅಂಬಲಪಾಡಿ ಫ್ಲೈ ಒವರ್ ಕಾಮಗಾರಿಯಿಂದ ಸರ್ವೀಸ್ ರಸ್ತೆಗಳು ಹೊಂಡ ಮಯವಾಗಿದ್ದು, ಹೊಂಡ ಮುಚ್ಚದೇ ನಿರ್ಲಕ್ಷ್ಯ ವಹಿಸಿರುವ ಕಾರಣ ಒರ್ವ ಬೈಕ್ ಸವಾರನ ಬಲಿಯಾಗಿದೆ.
ಚಲಿಸುತ್ತಿದ್ದ ಲಾರಿಯ ಪಕ್ಕದಲ್ಲಿ ಹಾದು ಹೋಗುತ್ತಿದ್ದ ಬೈಕ್, ದುರಸ್ತಿಗೊಳಿಸದ ಹೊಂಡ ಕ್ಕೆ ಬಿದ್ದಿದೆ. ನಿಯಂತ್ರಣ ತಪ್ಪಿ ಬೈಕ್ ಸವಾರ ಲಾರಿಯ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಯಾಗಿದೆ.
ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು, ಕರಾವಳಿ ಜಂಕ್ಷನ್ ಫ್ಲೈ ಓವರ್ ಕಾಂಟ್ರಾಕ್ಟರ್ ಕಾರ್ಲ ಕನ್ಸ್ಟ್ರಕ್ಷನ್ ಕಂಟ್ರಾಕ್ಟರ್, ಲಾರಿ ಚಾಲಕನ ವಿರುದ್ದ ಉಡುಪಿ ಎಸ್ ಪಿ .ಹರಿರಾಮ್ ಶಂಕರ್. ಪ್ರಕರಣ ದಾಖಲಿಸಿಕೊಂಡಿದ್ದಾರೆ.