ಪಡುಬಿದ್ರಿ : ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ನಡೆಸಿದ ಬಳಿಕ ನಂಬಿಕೆ ದ್ರೋಹವೆಸಗಿದ ಬಗ್ಗೆ ಸಂತ್ರಸ್ಥ ಮಹಿಳೆಯೊಬ್ಬರು ಪಡುಬಿದ್ರಿ ಠಾಣೆಗೆ ದೂರು ನೀಡಿದ್ದು ಆರೋಪಿಯ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಜಿಲ್ಲೆ ಕ್ಯಾತಸಂದ್ರದ ಲಕ್ಷ್ಮಿ (35) ಅವರ ಪರಿಚಯವನ್ನು ಬೆಳೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ವಿವಿಧೆಡೆ ಕರೆದೊಯ್ದು ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ವಂಚಿಸಿದ ಬೋಂಟಳಿಕೆ ನಿಡ್ಡೋಡಿಯ ಆರೋಪಿ ಚೇತನ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
ಲಕ್ಷ್ಮಿ ಅವರ ಪತಿ 5 ವರ್ಷಗಳ ಹಿಂದೆ ಮೃತಪಟ್ಟಿದ್ದು, ಇಬ್ಬರು ಮಕ್ಕಳಿದ್ದಾರೆ. 2024ನೇ ಅಕ್ಟೋಬರ್‌ನಲ್ಲಿ ಬ್ಯೂಟಿಶಿಯನ್ ತರಬೇತಿಗಾಗಿ ಮಂಗಳೂರಿಗೆ ಬಂದು ಒಂಟಿಯಾಗಿ ಉಳಿದಿದ್ದರು. ನೆರೆಮನೆಯ ಮಂಜುಳಾ ಮೂಲಕ ಆಕೆಯ ಸಂಬಂಧಿ ಚೇತನ್‌ನ ಪರಿಚಯವಾಗಿತ್ತು. ಅನಂತರ ವಿವಿಧೆಡೆ ಕರೆದೊಯ್ದುದು ಮದುವೆಯ ನಾಟಕವಾಡಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.