Home Crime ಓಮನ್‌ನಲ್ಲಿ ಭೀಕರ ಅಪಘಾತ : ಉಡುಪಿ ಮೂಲದ ಯುವಕ ಸಹಿತ ಮೂವರ ಮೃತ್ಯು…!!

ಓಮನ್‌ನಲ್ಲಿ ಭೀಕರ ಅಪಘಾತ : ಉಡುಪಿ ಮೂಲದ ಯುವಕ ಸಹಿತ ಮೂವರ ಮೃತ್ಯು…!!

ಉಡುಪಿ: ಓಮನ್‌ನ ಉತ್ತರ ಅಲ್ ಬಟಿನಾ ಗವರ್ನರೇಟ್‌ನ ಲಿವಾ ವಿಲಾಯತ್‌ನಲ್ಲಿ ಫೆ.8ರಂದು ಮುಂಜಾನೆ ಸಂಭವಿಸಿದ ಸರಣಿ ಅಪಘಾತದಲ್ಲಿ ಉಡುಪಿ ಕಾಪು ಸಮೀಪದ ಉಚ್ಚಿಲ ಕಲತ್ತೂರು ನಿವಾಸಿ ಚೇತನ್ (26) ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗರಿಕ ರಕ್ಷಣಾ ಮತ್ತು ಆಂಬ್ಯುಲೆನ್ಸ್ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ಧೃಡಪಡಿಸಿದ್ದಾರೆ.